ದಾವಣಗೆರೆ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ನಡೆದಿದೆ.

ಮುಜಾಮಿಲ್ (15) ಮೃತ 9 ನೇ ತರಗತಿ ವಿದ್ಯಾರ್ಥಿ. ಗೋಗುದ್ದು ಗ್ರಾಮದ ಚಮನ್ ಸಾಬ್ ಹಾಗೂ ಫಾತೀಮಾ ದಂಪತಿಯ ದ್ವೀತಿಯ ಪುತ್ರ. ಹನುಮಂತಪುರ ಗ್ರಾಮದ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದನು.

ರಜೆ ಹಿನ್ನೆಲೆ ವಿದ್ಯಾರ್ಥಿ ಮನೆಗೆ ಬಂದಿದ್ದ. ಮನೆಯಲ್ಲಿ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದಾಗ ಹೃದಯಾಘಾತವಾಗಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.