ಗುಂಡ್ಲುಪೇಟೆ: ಆಹಾರಕ್ಕಾಗಿ ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯೊಂದು ಅದರ ಮುಳ್ಳುಗಳು ಚುಚ್ಚಿದ ಪರಿಣಾಮ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಸಿವಿನಿಂದಿದ್ದ ಚಿರತೆಯು ಮುಳ್ಳುಹಂದಿಯನ್ನು ಕಂಡ ಕೂಡಲೇ ಅದರ ಮೇಲೆರಗಿದೆ. ಈ ವೇಳೆ ತನ್ನ ರಕ್ಷಣೆಗಾಗಿ ಮುಳ್ಳುಹಂದಿಯು ಮೈಮೇಲಿನ ಹರಿತವಾದ ಮುಳ್ಳುಗಳನ್ನು ಬಿಟ್ಟಿದೆ. ಇದರ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದೆ.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ದೇಹದ ವಿವಿಧ ಭಾಗಗಳಲ್ಲಿ ಮುಳ್ಳುಹಂದಿಯ ಮುಳ್ಳುಗಳು ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ.