ನವದೆಹಲಿ: 1999ರ ಕಾರ್ಗಿಲ್ ಯುದ್ಧದ ವೀರ, ‘ಲಯನ್ ಆಫ್ ಲಡಾಖ್’ ಎಂದೇ ಖ್ಯಾತರಾಗಿದ್ದ ಮಹಾವೀರ ಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಸೋನಮ್ ವಾಂಗ್ಚುಕ್ (61) ಅವರು ಏಪ್ರಿಲ್ 10, ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾಂಗ್ಚುಕ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಸೇನೆಯಲ್ಲಿನ ಮೂರು ದಶಕಗಳ ಸೇವೆಯಲ್ಲಿ ಸೋನಮ್ ಅವರ ಕೊಡುಗೆ ಅಪಾರ. ಸಚಿವ ರಾಜನಾಥ್ ಸಿಂಗ್ ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯ ಹಿರಿಯ ಯೋಧ ಸೋನಮ್ ಅವರ ನಿಧನಕ್ಕೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

