ಬೆಂಗಳೂರು: ಬಿಸಿಲಿನ ಬೇಗೆ ಒಂದೆಡೆಯಾದರೆ ನೀರಿನ ಕೊರತೆ ಇನ್ನೊಂದಡೆ ಅಲ್ಲದೇ ಇತ್ತಿಚೆಗೆ ಶುರುವಾದ ಕಾಲರಾ ರೋಗ ಮತ್ತೊಂದೆಡೆ. ಈ ಎಲ್ಲಾ ತೊಂದರೆಗೆ ಬೆಂಡಾಗಿರುವ ಸಿಲಿಕಾನ್ ಸಿಟಿ ಮಂದಿ ಗೆ ಈಗ ಮತ್ತೊಂದು ಶಾಕ್ ಕಾದಿದೆ.
ಇದ್ದಕಿದ್ದಂತೆ ಹೆಚ್ಚಾದ ಕಾಲಾರ ರೋಗದಿಂದ ಎಚ್ಚತ್ತ ವೈದ್ಯರು ಜಲಮೂಲದ ಶುದ್ಧೀಕರಣಕ್ಕೆ ನೀರಿನ ಟೆಸ್ಟಿಂಗ್ ಮಾಡಿದೆ ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು ಈ ಮೂಲಕ ಕೆಲವಡೆ ನೀರಿನಲ್ಲಿ ಟಾಯ್ಲೆಟ್ ನೀರು ಮತ್ತು ಕಲುಷಿತ ನೀರು ಮಿಕ್ಸ್ ಆಗಿರೋದು ಬೆಳಕಿಗೆ ಬಂದಿದೆ.
ಒಟ್ಟು 570 ಕಡೆಯಲ್ಲಿ ನೀರನ್ನ ಸಂಗ್ರಹ ಮಾಡಿ ಟೆಸ್ಟಿಂಗ್ ಮಾಡಲಾಗಿತ್ತು. ಈ ಪೈಕಿ 270 ಕಡೆಯ ನೀರಿನ ರಿಪೋರ್ಟ್ ಬಂದಿದ್ದು, ಈ ಪೈಕಿ 20 ಕಡೆಯ ನೀರಿನಲ್ಲಿ E.coli ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇಂತಹ ನೀರಿನಿಂದ ಕಾಲರ ನಂತಹ ಮಾರಕ ರೋಗಗಳು ಕಾಡುವ ಭಾರಿ ಸಾಧ್ಯತೆ ಇರುವುದರಿಂದ ಆರ್.ಓ ಪ್ಲಾಂಟ್ ಗಳಿಗೀ ಬೀಗ ಬಿದ್ದಿದೆ.