News Karnataka Kannada
Wednesday, May 08 2024
ಬೆಂಗಳೂರು

24 ಸಾವಿರ ಲೀಟರ್‌ ಮೇಲ್ಪಟ್ಟ ಟ್ಯಾಂಕರ್‌ ಗಳಿಗೆ ದರ ನಿಗದಿ

ನಗರದ ಕಡಿಯುವ ಸರಬರಾಜು ಮತ್ತು ಒಳಚಂರಂಡಿ ಮಂಡಳಿ ಇದೀಗ ಒಂದು ಆದೇಶವನ್ನು ಹೊರಡಿಸಿದ್ದು 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ.24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ 200 ವಾಟರ್ ಟ್ಯಾಂಕರ್​​ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ಪಡೆದಿದೆ.
Photo Credit : NewsKarnataka

ಬೆಂಗಳೂರು: ನಗರದ ಕಡಿಯುವ ಸರಬರಾಜು ಮತ್ತು ಒಳಚಂರಂಡಿ ಮಂಡಳಿ ಇದೀಗ ಒಂದು ಆದೇಶವನ್ನು ಹೊರಡಿಸಿದ್ದು 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ.24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ 200 ವಾಟರ್ ಟ್ಯಾಂಕರ್​​ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಸಾರ್ವಜನಿಕರು ಈ ವಾಟರ್​ ಟ್ಯಾಂಕರ್​ಗಳನ್ನು ಉಪಯೋಗಿಸಕೊಳ್ಳವಂತೆ ಅನುವು ಮಾಡಿ ಕೊಟ್ಟಿದೆ.

24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳ ದರ
16 ಸಾವಿರ ಲೀಟರ್ ಟ್ಯಾಂಕರ್​ಗೆ 12,100 ರೂಪಾಯಿ
23 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್​ಗೆ 15400 ರೂಪಾಯಿ
30 ಸಾವಿರ ಲೀಟರ್ ಖಾಲಿ ಟ್ಯಾಂಕರ್​ಗೆ 17,900 ರೂಪಾಯಿ ನಿಗದಿ ಮಾಡಿದೆ.

600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳ ದರ
6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.
6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.
8 ಸಾವಿರ ಲೀಟರ್ ಟ್ಯಾಂಕರ್​ಗೆ 700 ರೂ. ದರ ನಿಗದಿ‌‌ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.
8 ಸಾವಿರ ಲೀಟರ್​ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.
5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್​​ಗೆ 1000 ರೂ. ದರ ನಿಗದಿ ಮಾಡಲಾಗಿದೆ.
1200 ಲೀಟರ್ ಟ್ಯಾಂಕರ್​​​ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.

ಜಲಮಂಡಳಿ ಈ ಹಿಂದೆ 600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳಿಗೂ ಮಾತ್ರ ದರ ನಿಗದಿ ಮಾಡಿತ್ತು. ಇದೀಗ 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ. ಜಿಎಸ್​​ಟಿ ಸೇರಿಸಿ ಈ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು