ಬೆಂಗಳೂರು: ಕೆರೆಯಲ್ಲಿ ಈಜಲು ಬಂದ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ದಾರುಣವಾಗಿ ಸಾವನಪ್ಪಿದ್ದಾರೆ. ಈ ಘಟನೆ ಆಗರ ಕೆರೆಯಲ್ಲಿ ನಡೆದಿದೆ .ಪೃಥ್ವಿರಾಜ್, ನವೀನ್ ಮೃತ ವಿದ್ಯಾರ್ಥಿಗಳು.
ಕೆಂಗೇರಿ ಉಪನಗರ ಸರ್ಕಾರಿ ಪ್ರೌಢ ಶಾಲೆಯ ಒಟ್ಟು 11 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕೆರೆಗೆ ಈಜಲು ಬಂದಿದ್ದು ದುರಾದೃಷ್ಟವಶಾತ್ ಆ ಕೆರೆ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಈ ಇಬ್ಬರು ಹುಡುಗರು ದೊಡ್ಡಬೆಲೆ ಮೂಲದವರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.