ಬೆಂಗಳೂರು: ತಮಿಳುನಾಡಿನ ಮತ ಎಣೆಕೆಯಲ್ಲಿ ಟಿವಿಕೆ ಭಾರೀ ಮುನ್ನಡೆ ಸಾಧಿಸಿದೆ. ಪಕ್ಷದ ಮುಖ್ಯಸ್ಥ ನಟ ವಿಜಯ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು. ಇನ್ನೂ ಟಿವಿಕೆ ಹೊಸ ಪಕ್ಷ ವಿಜಯ್ ಅಲೆಯಿಂದ ಮುನ್ನಡೆ ಸಾಧಿಸಿರಬಹುದು ಎಂದರು. ಬಳಿಕ ವಿಜಯ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇನ್ನೂ ಉಪ ಚುನಾವಣೆ ನಿರೀಕ್ಷೆ ಇತ್ತು, ದಾವಣಗೆರೆಯಲ್ಲಿ ನಮ್ಮ ಕಾರಣದಿಂದ ಲೀಡ್ ಕಡಿಮೆ ಆಗಬಹುದು. ಆದರೆ ನಾವು ಗೆಲ್ಲುತ್ತೇವೆ. ಬಾಗಲಕೋಟೆಯಲ್ಲೂ ನಾವು ಗೆಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ. ಅಲ್ಲಿ ಬಿಜೆಪಿ ಮುನ್ನಡೆಗೆ ಆಡಳಿತ ವಿರೋಧಿ ಅಲೆ ಇರಬಹುದು. ಅಸ್ಸಾಂನ ಸೋಲನ್ನು ಒಪ್ಪುತ್ತೇವೆ. ಇನ್ನೂ ಕೇರಳದಲ್ಲಿ ನಮ್ಮ ನಿರೀಕ್ಷೆ ಮೀರಿ ಮುನ್ನಡೆ ಗಳಿಸಿದ್ದೇವೆ ಎಂದರು.