ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷ (ಬಿಜೆಪಿ) ಆರ್ಥಿಕ ಪ್ರಕೋಷ್ಟದ (Economic Cell) ಸಂಚಾಲಕರಾಗಿ ಚಾರ್ಟರ್ಡ್ ಅಕೌಂಟೆಂಟ್ ಸಿ.ಎ. ಎಸ್.ಎಸ್. ನಾಯಕ್ ಅವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಳ ಅವರು ಸಿ.ಎ. ಎಸ್.ಎಸ್. ನಾಯಕ್ ಅವರನ್ನು ಪಕ್ಷದ ಶಾಲು ಹೊದಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು.

ಸಿ.ಎ. ಎಸ್.ಎಸ್. ನಾಯಕ್ ಅವರು ಬಿಜೆಪಿ ಪಕ್ಷದೊಂದಿಗೆ ಸಹ ಸಂಚಾಲಕರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕೇಂದ್ರ ಬಜೆಟ್, ತೆರಿಗೆ ಸುಧಾರಣೆಗಳು, ವಿಕಸಿತ ಭಾರತ ಪರಿಕಲ್ಪನೆ, ಭಾರತೀಯ ಆರ್ಥಿಕತೆ, ಎಂಎಸ್‌ಎಂಇ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಹಲವು ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಅವರು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನಲ್ಲಿ ಮಹಾಪೋಷಕರಾಗಿ, ಜಿಎಸ್‌ಬಿ ಹಿತರಕ್ಷಣ ವೇದಿಕೆಯ ವಿದ್ಯಾ ಪೋಷಕ ನಿಧಿ ಅಧ್ಯಕ್ಷರಾಗಿ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮಂಗಳೂರು ಶಾಖೆಯ ಅಧ್ಯಕ್ಷರಾಗಿ, ನಿಟ್ಟೆ ಅಟಲ್ ಇಂಕ್ಯುಬೇಷನ್ ಸೆಂಟರ್‌ನಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಜೊತೆಗೆ ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಸಮಿತಿಯ ಸಹ ಆಯ್ಕೆಯ ಸದಸ್ಯರಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾಗಿ, ಇಸ್ಕಾನ್ ಮಂಗಳೂರು ದೇವಾಲಯ ಸಲಹಾ ಸಮಿತಿಯ ಸದಸ್ಯರಾಗಿ, ಇಬ್ರೋಸ್ ಕಾಂಪ್ಲೆಕ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ, 14 ಎಂಎಸ್‌ಎಂಇ ಸಮಾವೇಶಗಳ ನಿರ್ದೇಶಕರಾಗಿ ಮತ್ತು ಐಸಿಎಐ ವತಿಯಿಂದ ಎಂಎಸ್‌ಎಂಇ ಕನ್ಸಲ್ಟೆಂಟ್ಸ್‌ಗಳಿಗೆ ಮಾಸ್ಟರ್ ಟ್ರೈನರ್ ಆಗಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .

ಸಿ.ಎ. ಎಸ್.ಎಸ್. ನಾಯಕ್ ಅವರ ಈ ನೇಮಕಾತಿಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಈ ಸಂದರ್ಭದಲ್ಲಿ ಸಿ ಎ ಎಸ್ ಎಸ್ ನಾಯಕ್ ರವರು ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಆಶಯ ವ್ಯಕ್ತ ಪಡಿಸಿದ್ದಾರೆ . ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿರುತ್ತಾರೆ.