News Karnataka Kannada
Monday, May 13 2024
ತುಮಕೂರು

ದೇಶದ ಅಭಿವೃದ್ದಿಗೆ ಪ್ರಜೆಗಳಾದ ನಾವು ಕೈ ಜೋಡಿಸಬೇಕು : ಪ್ರೊ. ಸುಷ್ಮಾ ಯಾದವ್

We as citizens should join hands for the development of the country: Prof. Sushma Yadav
Photo Credit :

ತುಮಕೂರು: ದೇಶವು ವಿಶ್ವ ಮಟ್ಟಕ್ಕೆ ಬೆಳೆಯುವುದು ಪ್ರತಿ ಊರಿನ ದೇಶದ ಪ್ರಜೆಗಳು ಕೈ ಜೋಡಿಸಿದಾಗ ಮಾತ್ರ. ಎಲ್ಲ ನಗರಗಳು ಸ್ಪಾರ್ಟ್ ಸಿಟಿ ಆಗಬೇಕು. ಅಭಿವೃದ್ದಿಯ ಕಡೆಗೆ ಸಾಗುತ್ತಿರುವ ತುಮಕೂರು. ಹಲವು ತೊಂದರೆಗಳನ್ನು ಎದುರಿಸುವುದು ಸಹಜ ಆದರೆ ಅದನ್ನು ಶಿಕ್ಷಣದಿಂದ ಬಗೆ ಹರಿಸಬಹುದು. ನಾವು ಪ್ರಾದೇಶಿಕತೆ ಬೆಳೆಸಿದರೆ ರಾಷ್ಟೀಯತೆ ಬೆಳೆಯುತ್ತದೆ ಎಂದು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ ಸಮಿತಿಯ ಸದಸ್ಯರಾದ ಪ್ರೊ. ಸುಷ್ಮಾ ಯಾದವ್ ಅಭಿಪ್ರಾಯ ಪಟ್ಟರು.

ತುಮಕೂರು ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ನಂದಗೋಕುಲ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣದಲ್ಲಿ ತುಮಕೂರು ಮುಂದಿದೆ, ಯುವಕರ ಕೌಶಲ್ಯಯುಕ್ತ ಶ್ರಮಕ್ಕೆ ಬೆಲೆ ಇದೆ. ಮೊದಲು ಬರುವುದು ದೇಶ. ದೇಶಕ್ಕೋಸ್ಕರ ಅಭಿವೃದ್ದಿ ಮಾಡಬೇಕು ಕಾಲಕ್ಕೆ ತಕ್ಕಂತೆ ಯುವಜನತೆ ಎಲ್ಲಾ ರೀತಿಯಿಂದಲೂ ಬದಲಾಗಬೇಕು ಎಂದರು.

ತುಮಕೂರು ವಿಧಾನಸಭಾ ಶಾಸಕರಾದ ಜ್ಯೋತಿಗಣೇಶ್ ರವರು ಮಾತನಾಡಿ ಸಮಾಜಕ್ಕೆ ದಿಕ್ಸೂಚಿಯಾಗುವ ಕಾರ್ಯಕ್ರಮ ಇದಾಗಿದೆ. ರಾಷ್ಟೀಯತೆ ಎಲ್ಲರಿಗೂ ಇರಬೇಕು ಇರುವಂತಹ ಅಧಿಕಾರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಚಿಕ್ಕಪ್ಪಯ್ಯ ರವರು ವಯಸ್ಸಿನ ಬಗ್ಗೆ ಯೋಚನೆ ಮಾಡಬೇಡಿ ಮನಸ್ಸಿನ ಬಗ್ಗೆ
ಯೋಚನೆಮಾಡಿ. ಒಳ್ಳೆಯ ದಾರಿ ಒಳ್ಳೆಯ ನಡೆತೆ ಇರಲಿ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಕ್ಕೆ ಹೋಗುವಂತಹವರು ನೀವಾಗುವಿರಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಆರ್. ಕೆ. ರ್ಶರೀನಿವಾಸ್ ಅವರು ಮಾತನಾಡಿ ಭಾರತೀಯ ಆಧ್ಯಾತ್ಮ ಪರಂಪರೆ ಮತ್ತು ಯುವಕರ ಆಶಾಕಿರಣ ಯೂತ್ ಐಕಾನ್
ಎಂದೇ ಪ್ರಸಿದ್ದರಾದ ಸ್ವಾಮಿ ವಿವೇಕಾನಂದರೇ ನಮ್ಮೆಲ್ಲರಿಗೂ ಸ್ಪೂರ್ತಿ. ವಿದ್ಯಾರ್ಥಿ ದಿಸೆಯಿಂದ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿ ವಿದ್ಯಾರ್ಥಿಗಳು ಹಲಾವಾರು ಹೋರಾಟಗಳನ್ನು ಮಾಡಿಕಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಸೇವೆ ಮಾಡುವುದಕ್ಕೆ ಸಿಕ್ಕ ಪುಟ್ಟ ಅವಕಾಶ ಈ ಸಿಂಡಿಕೇಟ್ ಸದಸ್ಯ ಸ್ಥಾನ. ನಮಗೆ ಸಿಕ್ಕಂತಹ ಚಿಕ್ಕ ಸಮಯದಲ್ಲಿಯೇ ಸಾಧ್ಯವಾದಷ್ಟು ಕೆಲಸವನ್ನು ಮಾಡಿರುವ ಸಂತೃಪ್ತಿ ಇದೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಅದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ಶಿವಚಿತ್ತಪ್ಪ, ಕರುನಾಡ ವಿಜಯಸೇನೆ ಅಧ್ಯಕ್ಷ ಅರುಣ್ ಕುಮಾರ್, ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪರಮಶಿವಯ್ಯ ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು