News Karnataka Kannada
Sunday, April 28 2024
ತುಮಕೂರು

ಅಡಕೆ ಸ್ಮಗ್ಲಿಂಗ್ ದಂಧೆಗೆ ಬಿಜೆಪಿ ಸರ್ಕಾರದಿಂದ ಕಡಿವಾಣ, ರೋಡ್‌ ಶೋನಲ್ಲಿ ಅಮಿತ್‌ ಶಾ ಹೇಳಿಕೆ

Union Home Minister Amit Shah addresses roadshow in Gubbi to campaign for BJP
Photo Credit : News Kannada

ತುಮಕೂರು: ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೇವಲ ಮುಸ್ಲಿಂ ಧರ್ಮಕ್ಕೆ ಶೇಕಡಾ 4 ಮೀಸಲಾತಿ ನೀಡಿದ್ದ ಕಾಂಗ್ರೆಸ್ ಧೋರಣೆ ಮುರಿದು ಲಿಂಗಾಯಿತ ಒಕ್ಕಲಿಗ ಸೇರಿದಂತೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಸಹಸ್ರಾರು ಬಿಜೆಪಿ ಕಾರ್ಯಕರ್ತರ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೇ ತಿಂಗಳ 10 ರಂದು ನಿಮ್ಮ ಅಭ್ಯರ್ಥಿ ದಿಲೀಪ್ ಕುಮಾರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ರಚನೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ದೇಶದ ಶೇಕಡಾ 25 ರಷ್ಟು ರೈತರಿಗೆ ಅನುಕೂಲ ಮಾಡಿದ ಬಿಜೆಪಿ ಸರ್ಕಾರ ಅಡಿಕೆ ವ್ಯಾಪಾರದ ಸ್ಮಗ್ಲಿಂಗ್ ದಂಧೆಗೆ ಕಡಿವಾಣ ಹಾಕಲು ಕೆಲ ನಿರ್ಧಾರ ಕೈಗೊಳ್ಳಲಾಯಿತು. ಮೋದಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನ ಎಂದೂ ಕಿಸಾನ್ ವರ್ಗದ ಪರ ಒಳ್ಳೆಯ ಕೆಲಸವನ್ನೇ ಮಾಡಿದೆ. ಅಡಿಕೆ ಆಮದು ಕೂಡಾ ಒಂದು ವರ್ಗದ ಜನರ ಕಡಿವಾಣಕ್ಕೆ ಮಾಡಲಾಗಿತ್ತು. ಈಗ ಎಲ್ಲವೂ ರೈತರಿಗೆ ಅರ್ಥವಾಗಿದೆ. ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಸಹ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕಾರಣ ಎಂಬುದು ಮರೆಯುವಂತಿಲ್ಲ ಎಂದ ಅವರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಮಾಡಿದ ಕೆಲಸಗಳು ಇಂದಿಗೂ ಸ್ಮರಣೀಯ. ಇಲ್ಲಿ ಬಿಜೆಪಿ ಸರ್ಕಾರಕ್ಕೆ ಮತದಾರರು ಸಹಕರಿಸಿದ್ದಲ್ಲಿ ಮುಂದಿನ ಪ್ರಧಾನಿ ಮೋದಿ ಅವರೇ ಆಗಲಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿಗೆ ಅಮಿತ್ ಷಾ ಅವರ ಭೇಟಿ ಬೂಸ್ಟರ್ ಡೋಸ್ ಕೊಟ್ಟಂತೆ ಆಗಿದೆ. ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅನ್ನುವ ರೀತಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹೈಟೆಕ್ ಆಸ್ಪತ್ರೆ, ಶಾಲೆ, ಕೈಗಾರಿಕಾ ವಲಯ ಸ್ಥಾಪನೆ ಮಾಡುವ ಜೊತೆಗೆ ನೀರಾವರಿ ಯೋಜನೆಗೆ ಪ್ರಮುಖ ಆದ್ಯತೆ ನೀಡುತ್ತೇನೆ. ನಮ್ಮ ಕೃಷಿಕರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಕೆಲಸ ಸರ್ಕಾರ ಮಾಡಿಕೊಡುವಂತೆ ಅಮಿತ್ ಷಾ ಅವರಲ್ಲಿ ಮನವಿ ಮಾಡಿದರು.

ಭಾಷಣದ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಾಯಿ ಭುವನೇಶ್ವರದೇವಿ, ಶ್ರೀ ಚನ್ನಬಸವೇಶ್ವರಸ್ವಾಮಿ, ಚಿದಂಬರಾಶ್ರಮ, ಸಿದ್ದಗಂಗಾ ಮಠ, ಸಿದ್ದಲಿಂಗೇಶ್ವರಸ್ವಾಮಿ, ಚುಂಚನಗಿರಿ ಮಠವನ್ನು ಸ್ಮರಿಸಿ ಪ್ರಣಾಮವನ್ನು ತಿಳಿಸಿದರು.

ರೋಡ್ ಶೋ ನಲ್ಲಿ ಸಂಸದ ಜಿ.ಎಸ್.ಬಸವರಾಜು, ಉಸ್ತುವಾರಿ ಸಂಜಯ್ ಭಾಟಿಯಾ, ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ, ಸಂಪಿಗೆ ಶ್ರೀಧರ್, ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಮುಖಂಡ ಪಿ.ಬಿ.ಚಂದ್ರಶೇಖರಬಾಬು ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು