News Karnataka Kannada
Tuesday, April 30 2024
ತುಮಕೂರು

ಬಾವಲಿ ಬೇಟೆಯಾಡಿ ಬಾಯಲ್ಲಿ ಕಚ್ಚಿಕೊಂಡು ಹೋದ ಚಿರತೆ

Leopard hunts bat, bites it in mouth
Photo Credit : News Kannada

ತುಮಕೂರು: ಚಿರತೆಯೊಂದು ಬಾವಲಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕಂಡುಬಂದಿದೆ. ದೃಶ್ಯವು ಚಿರತೆಗಳ ಅಧ್ಯಯನಕ್ಕಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿರತೆಗಳು ಬೇಟೆಯಾಡಿ ಬದುಕುವ ಪ್ರಾಣಿಗಳು. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಬಾವಲಿಯನ್ನು ಬೇಟೆಯಾಡಿದೆ. ಇಂತಹ, ಅಪರೂಪದ ದೃಶ್ಯವೊಂದು ಇದೇ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ʼಇಂಡಿಯನ್ ಫ್ಲೈಯಿಂಗ್ ಫಾಕ್ಸ್’ ಅಥವಾ ಹಾಲಕ್ಕಿ ಎಂದು ಕರೆಯಲಾಗುವ ಈ ದೂಡ್ಡ ಬಾವಲಿಗಳು 1.5ಕೆಜಿಯಷ್ಟು ತೂಕವಿರುತ್ತವೆ. ರೆಕ್ಕೆಗಳನ್ನು ಹರಡಿದರೆ ಐದು ಅಡಿಗಳಷ್ಟು ಹರಡುತ್ತವೆ.

ಕಡವೆ, ಸಾರಂಗ, ಕಾಡು ಹಂದಿ, ಕುರಿ , ಮೇಕೆ, ನಾಯಿ, ಮೊಲ, ಮುಳ್ಳುಹಂದಿ, ಹೆಗ್ಗಣ, ಉಡ, ಮೀನಿನಂತಹ ಪ್ರಾಣಿಗಳು ಚಿರತೆಯ ಆಹಾರ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ, ಬಾವಲಿ ಬೇಟೆಯಾಡಿರುವ ಅಪರೂಪದ ಸಂಗತಿ, ಬಹುಶಃ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಹೇಳುತ್ತಾರೆ.

ಹೊಳೆಮತ್ತಿ ನೇಚರ್ ಫೌಂಡೇಶನ್‌ ಹಾಗೂ ನೇಚ‌ ಕನ್ಸರ್ವೇಶನ್ ಫೌಂಡೇಶನ್ ನ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾದಲ್ಲಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಈ ಚಿತ್ರ ಸರೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು