ತುಮಕೂರು: ಸಿದ್ಧಗಂಗಾ ಮಠದ ಜಾತ್ರಗೆಂದು ಬಂದಿದ್ದ ಬಾಲಕಿ ಮೇಲೆ ಸಾಮೂಹಿಕ ಹತ್ಯಾಚಾರವೆಸಗಲಾಗಿದೆ. ಈ ಘಟನೆ ನಗರದ ಬಂಡೆಪಾಳ್ಯದ ಮನೆಯೊಂದರಲ್ಲಿ ನೆಡದಿದೆ. ಪ್ರಕರಣ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೂವರನ್ನ ಬಂಧಿಸಲಾಗಿದೆ.
ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಬಂಧಿತ ಆರೋಪಿಗಳು. ಮೊಬೈಲ್ನಲ್ಲಿ ಬಾಲಕಿ ತನ್ನ ಬಾಯ್ ಫ್ರೇಂಡ್ ಜೊತೆಯಿದ್ದ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡ ಕಿಡಿಗೇಡಿಗಳು ಅದನ್ನು ವೈರಲ್ ಮಾಡುವುದಾಗಿ ಬಾಲಕಿಗೆ ಬೆದರಿಸಿದ್ದಾರೆ.
ನಂತರ ಬಲವಂತವಾಗಿ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಇನ್ನು ಈ ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.