ತುಮಕೂರು

ಇತಿಹಾಸ ತಿರುಚಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದೇ ಶಿಕ್ಷಣ ಸಚಿವರ ಸಾಧನೆ- ಸಿದ್ದರಾಮಯ್ಯ

ತುಮಕೂರು: ಡಾ: ಬಿ.ಅರ್ ಆಂಬೇಡ್ಕರ್  ಅವರು ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲಾ ಎಂದಿದ್ದರು, ಇಂತಹ ಮಹಾನ್ ವ್ಯಕ್ತಿಗಳಾದ ಬಸವೇಶ್ವರರ, ಕುವೆಂಪು, ನಾರಾಯಣ ಗುರು, ಕೆಂಪೇಗೌಡರ, ಸಂತ ಶಿಶುನಾಳ ಶರೀಫರ ಇತಿಹಾಸವನ್ನು ತಿರುಚಿ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ ನೀಚ ಶಿಕ್ಷಣ ಸಚಿವ ನಾಗೇಶ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ತಿಪಟೂರು ನಗರದ ಕಲ್ಪತರು ಕ್ರಿಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಷಡಕ್ಷರಿ ಪರವಾಗಿ ಮತಯಾಚನೆ ಕಾರ್ಯಕ್ರಮದಲ್ಲಿ, ಮಾತನಾಡಿದ ಅವರು ಸಚಿವ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಎಂದರೆ ಸರ್ವಜನಾಂಗದವರಿಗೂ ಇವರು ಆಗಿರುತ್ತಾರೆ. ಆದರೆ ಇವರು ಕೇವಲ ಆರ್,ಎಸ್, ಎಸ್ ನ ಸೇವಕರೆ ಹೊರತು ಸಾಮಾನ್ಯ ಜನರ ಸೇವಕರಲ್ಲಾ, ಇವರ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಮರೆತು ಕೇವಲ ಸಾಮಾಜವನ್ನು ಹೊಡೆಯುವ ಕೆಲಸ ಮಾಡಿದ್ದಾರೆ ಎಂದರು.

ಪೊಲೀಸರು ಇವರ ಕೈಗೊಂಬೆಯಂತೆ ಕೆಲಸ ಮಾಡಿದ್ದಕ್ಕೆ ಇವರಿಗೆ ಸರಿಯಾದ ಬಹುಮಾನ ಸಿಕ್ಕಿದೆ, ಒಂದು ವರ್ಗಾವಣೆಗೆ ೬೦ ರಿಂದ ೭೦ ಲಕ್ಷ ಲಂಚ ಪಡೆದಿದ್ದಾರೆ, ನಂದೀಶ್ ಎಂಬುವ ಸಬ್‌ಇನ್ಸ್‌ಪೆಕ್ಟರ್ ಅತ್ಮಹತ್ಯೆ ಮಾಡಿಕೊಂಡಾಗ ಇವರ ಸಚಿವ ಎಂ.ಟಿ.ಬಿ ನಾಗರಾಜ್ ಹೇಳುತ್ತಾನೆ ಇಷ್ಟೊಂದು  ಲಂಚಕೊಟ್ಟು ಬಂದ ಆತ ಸಾಲ ತೀರಿಸಲು ಆಗದೆ ಸತ್ತು ಹೋಗಿದ್ದಾನೆ ಎಂದು ಹೇಳಿದ್ದನು ಎಲ್ಲರೂ ನೋಡಿದ್ದಾರೆ,  ಪೊಲೀಸರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಾರೆ, ಮುಂದೆ ನಿಮ್ಮ ಭವಿಷ್ಯ ಹಾಳುಗೆಡುವುತ್ತಾರೆ ಎಂದು ಕಿವಿಮಾತು ಹೇಳಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕೊಬ್ಬರಿ ಮತ್ತು ರಾಗಿ ಬೆಳೆಗಾರರಿಗೆ ನನ್ನ ಅವಧಿಯಲ್ಲಿ ಬೆಂಬಲ ಬೆಲೆ ನೀಡಿದ್ದೆನು., ಷಡಕ್ಷರಿ ಶಾಸಕನಾಗಿದ್ದಾಗ ಒಂದೆ ಒಂದು ದಿನ ವ್ಯಯಕ್ತಿಕವಾಗಿ ಏನು ಕೇಳಲಿಲ್ಲಾ, ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಕೋಟಿ ಪಡೆದು ಉತ್ತಮ ಕಾರ್ಯ ಮಾಡಿದ್ದರು, ಇಂತಹವರನ್ನು ನೀವು ಶಾಸಕರನ್ನಾಗಿ ಆಯ್ಕೆಮಾಡುವುದು ನಿಮ್ಮೆಲ್ಲರ ಜವಬ್ದಾರಿ, ಇವರನ್ನು ಗೆಲ್ಲಿಸುವುದರಿಂದ ನನ್ನ ಶಕ್ತಿ ಹೆಚ್ಚುತ್ತದೆ, ಈ ಬಾರಿ ಕೆ.ಷಡಕ್ಷರಿಗೆ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿ ಎಂದು ಸೇರಿದ್ದ ಸಾವಿರಾರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಮಾತನಾಡಿ ಇಂದು ಸೇರಿರುವ ಸೇರಿರುವ ಸಾವಿರಾರು ಕಾರ್ಯಕರ್ತರನ್ನು ನನ್ನ ಸಹೋದರ ಸಹೋದರಿಯರು ಎಂದು ತಿಳಿದಿದ್ದೇನೆ, ತಾಲೂಕಿಗೆ ನನ್ನ ಅವಧಿಯಲ್ಲಿ ಎಸ್.ಟಿ.ಪಿ ಘಟಕ, ೨೪*೭ ಕುಡಿಯುವ ನೀರಿನ ಯೋಜನೆ, ಇದಕ್ಕೆ ೧೨೦ ಕೋಟಿ ಹಣ, ನಗರಸಭಾ ಕಟ್ಟಡ, ಮಿನಿ ವಿಧಾನ ಸೌಧ, ಪ್ರವಾಸಿ ಮಂದಿರ, ಹಾಸ್ಟೆ‌ಲ್‌ಗ ಳ ನಿರ್ಮಾಣ, ನರಸಿಂಹರಾಜು ಭವನಕ್ಕೆ ೨ ಕೋಟಿ ಹಣ, ಗ್ರಾಮೀಣ ರಸ್ತೆಗಳು, ನಗರದ ರಸ್ತೆಗಳು, ಇನ್ನು ಹತ್ತು ಹಲವು ಕೆಲಸಗಳನ್ನು ಮಾಡಿದ್ದೇನೆ, ಇನ್ನೊಂದು ಅವಕಾಶ ನೀಡಿದರೆ ನನ್ನ ಜೀವ ಇರುವವರೆಗೂ ನಿಮ್ಮಲ್ಲರ ಸೇವೆಗೆ ಮುಡಿಪಾಗಿಟ್ಟು ತಾಲೂಕಿನ ಅಭಿವೃದ್ಧಿಯ ಜೋತೆಗೆ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಲೋಕೇಶ್ವರ ಮಾತನಾಡಿ ತಾಲೂಕಿನ ಸಚಿವ ಬಡವರು ದಿನ ದಲಿತರು ಕೊವಿಡ್ ಸಂದರ್ಭದಲ್ಲಿ ತಿನ್ನಲು ಅನ್ನ ಕೇಳಿದರೆ ೨೦% ಕಮಿಷನ್ ಕೇಳಿ ತಾಲೂಕಿನ ಮರ್ಯಾದೆಯನ್ನೆ ದೇಶದ ಮಟ್ಟದಲ್ಲಿ ಹಾಳು ಮಾಡಿದರು. ಇಂತಹ ಒಂದು ಗ್ರಹಣ ಬಿಡಿಸುವುದೆ ನಮ್ಮೆಲ್ಲರ ಕೆಲಸ ಎಂದರು, ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಬೇಕು ಹಾಗೂ ಕುರುಬ ಸಮಾಜದ ಭವನ ನಿರ್ಮಾಣ ಮಾಡಿಕೊಡಬೇಕೆಂದು ಸಿದ್ದರಾಮಯ್ಯನವರಿಗೆ ಇದೇ ಸಂದರ್ಭದಲ್ಲಿ ಬೇಡಿಕೆ ಇಟ್ಟರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್,ಎಂ ರೇವಣ್ಣ, ಉಮಾಶ್ರೀ, ನಿಕಿತ್ ರಾಜ್ ಮೌರ್ಯ, ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತಿತರರು ಭಾಗವಹಿಸಿದ್ದರು.

Gayathri SG

Recent Posts

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

17 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

40 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

56 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

2 hours ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

2 hours ago