Categories: ಮಂಗಳೂರು

ಸುಳ್ಯ ಕಾಂಗ್ರೆಸ್‌ ಆಂತರಿಕ ಭಿನ್ನಮತ ಶಮನ, ಜತೆಯಾಗಿ ಕೆಲಸ ಮಾಡಲು ರೈ ಸೂಚನೆ

ಸುಳ್ಯ: ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತು ನಂತರದ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಕೆಪಿಸಿಸಿ ಮತ್ತು ಎಐಸಿಸಿ ನಿರ್ದೇಶನದಂತೆ ಮಾಜಿ ಸಚಿವ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಶಮನಗೊಂಡಿತು.

ಎಐಸಿಸಿ ಸದಸ್ಯ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್ ಉಪಸ್ಥಿತಿಯಲ್ಲಿ ಬಂಟ್ವಾಳ ದಲ್ಲಿ ರಮಾನಾಥ ರೈ ಯವರ ನಿವಾಸದಲ್ಲಿ ಮಾತುಕತೆ ನಡೆಯಿತು. ಈ ವೇಳೆ ಸುಳ್ಯ ಮತ್ತು ಕಡಬ ಬ್ಲಾಕ್ ಅಧ್ಯಕ್ಷರು ಅಭ್ಯರ್ಥಿ ಕೃಷ್ಣಪ್ಪ ಮತ್ತು ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಹೆಚ್ ಎಂ ನಂದಕುಮಾರ್ ಹಾಗೂ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬಳಗದ ಪ್ರಮುಖರ ಜೊತೆಗೆ ಮಾತುಕತೆ ನಡೆಸಿದರು. ಪಕ್ಷದ ಆಂತರಿಕ ಗೊಂದಲಗಳನ್ನು ಮತ್ತು ಕಾರ್ಯಕರ್ತರ ಬಗ್ಗೆ ಕೇವಲವಾಗಿ ಮಾತನಾಡಿದ ವಿಚಾರವನ್ನು ಬದಿಗಿರಿಸಿ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಜತೆಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಗೊಂದಲ ನಿವಾರಣೆ ಬಗ್ಗೆ ಸುಳ್ಯ ಮತ್ತು ಕಡಬ ಬ್ಲಾಕ್ ಜಂಟಿ ಪತ್ರಿಕಾಗೋಷ್ಠಿ ನಡೆಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ಬ್ಲಾಕ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕುಮಾರ್ ಕೇಡೆಂಜಿಗುತ್ತು, ಮಹೇಶ್ ಭಟ್ ಕರಿಕ್ಕಳ, ಗೋಕುಲ್ ದಾಸ್ ಸುಳ್ಯ, ಸತ್ಯಕುಮಾರ್ ಅಡಿಂಜ, ಉಷಾ ಅಂಚನ್, ಉಷಾ ಜೋಯ್,ಶಶಿಧರ್ ಎಂ ಜೆ ಭವಾನಿಶಂಕರ್ ಕಲ್ಮಡ್ಕ, ಸುಧೀರ್ ದೇವಾಡಿಗ, ಸತೀಶ್ ಶೆಟ್ಟಿ, ರವೀಂದ್ರ ರುದ್ರಪಾದ, ಪೈಜಲ್ ಕಡಬ, ಬಾಲಕೃಷ್ಣ ಮರೀಲ್, ಶೋಭಿತ್ ನಾಯರ್, ಶಿವರಾಮ ರೈ ಸುಬ್ರಮಣ್ಯ, ಗೋಪಾಲಕೃಷ್ಣ ಭಟ್, ಕಮಲಾಕ್ಷ ಕೊಲ್ಲಮೊಗ್ರ, ಅಬೂಬಕ್ಕರ್ ಅರಫಾ, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

Gayathri SG

Recent Posts

ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ…

10 mins ago

ಅತ್ಯಾಚಾರ ಪ್ರಕರಣ: ರೇವಣ್ಣನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಎಸ್‌ಐಟಿ ಅಧಿಕಾರಿಗಳು

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಬಸವನಗುಡಿಯಲ್ಲಿರುವ ಎಚ್‌.ಡಿ.ರೇವಣ್ಣ ಅವರ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು…

17 mins ago

ರಾಯ್‌ಬರೇಲಿಗೆ ಬಘೇಲ್‌, ಅಮೇಠಿಗೆ ಅಶೋಕ್‌ ಗೆಹಲೋತ್‌ ವೀಕ್ಷಕರಾಗಿ ನೇಮಕ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಗೆ ಕಾಂಗ್ರೆಸ್‌ ಹೈಕಮಾಂಡ್‌ ವೀಕ್ಷಕರನ್ನು ನೇಮಕ ಮಾಡಿದೆ.

27 mins ago

ಬಿಲ್ಲವ Vs ಬಂಟ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್…

29 mins ago

ಸಿಟ್ಟಿನಲ್ಲಿ ಕಪಾಳ ಮೋಕ್ಷ: ವ್ಯಕ್ತಿ ಮೃತ್ಯು

ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

35 mins ago

ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ: ನಾಲ್ಕು ಜನರ ಬಂಧನ

ಮಂಡ್ಯ ಜಿಲ್ಲೆಯ ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು…

35 mins ago