ತುಮಕೂರು: ದ್ವಿಚಕ್ರ ವಾಹನವೊಂದು ರೋಡ್ ಕ್ರಾಸ್ ಮಾಡುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿರುವ ಘಟನೆ ತುಮಕೂರಿನ ಹೊರವಲಯದಲ್ಲಿರುವ ರಿಂಗ್ ರಸ್ತೆಯಲ್ಲಿ ನಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಸ್ಎಲ್ಎನ್ ನಗರದ ನಿವಾಸಿಗಳಾದ ಸಂತೋಷ್, ನಾಗೇಶ್ ಮತ್ತು ವಿಜಯ್ ಕುಮಾರ್ ಒಂದೇ ಬೈಕ್ನಲ್ಲಿ ರೋಡ್ ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಎಂಟತ್ತು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದು, ಮೂವರಿಗೂ ಗಂಭೀರ ಗಾಯಗಳಾಗಿವೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಾರು ಚಾಲಕನನ್ನು ಕ್ಯಾತಸಂದ್ರ ಠಾಣಾ ವ್ಯಾಪ್ತಿಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ಗೆ ಇನ್ನೋವಾ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದು ಹಾಗೇ ಹೋಗಿದೆ. ಡಿಕ್ಕಿ ರಭಸಕ್ಕೆ ಬೈಕ್ನಲ್ಲಿದ್ದ ಮೂವರು 10 ಅಡಿಗೂ ಹೆಚ್ಚು ಮೇಲಕ್ಕೆ ಹಾರಿ ಬಿದ್ದಿದ್ದಾರೆ. ಸದ್ಯ ಈ ಘಟನೆು ತುಮಕೂರಿನ ರಿಂಗ್ರಸ್ತೆಯಲ್ಲಿ ನಡೆದಿದೆ. #bikeaccident #Tumkur #ringroad #caraccident pic.twitter.com/kzqzyevipY
— Bhima (@Bhima895143) August 31, 2023