ತುಮಕೂರು : ಶಾಲಾ ಮಕ್ಕಳಿಗೆ ಮಿಲ್ಕ್ ಪೌಡರ್ ಸರಬರಾಜಿನಲ್ಲಿ ಅಡೆತಡೆಯಾಗಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕಳೆದ ತಿಂಗಳು ಮಕ್ಕಳ ಮನೆಗಳಿಗೆ ಹಾಲಿನ ಪೌಡರ್ ಅನ್ನು ವಿತರಿಸಲಾಗಿದೆ. ಆದರೆ ಈ ತಿಂಗಳು ಹಾಲಿನ ಪೌಡರ್ ಸಂಗ್ರಹವಿಲ್ಲದಂತಾಗಿದೆ. ಹೀಗಾಗಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬಿಸಿಯೂಟ ಯೋಜನೆಗಳಡಿ ಕಳಪೆ ಆಹಾರ ಪದಾರ್ಥಗಳ ಕುರಿತು ದೂರು ಬಂದಿರುವುದು ಕೇವಲ ಮೂರು ಶಾಲೆಗಳಲ್ಲಿ ಮಾತ್ರ. ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.