ತುಮಕೂರು: ಹೆಜ್ಜೇನು ದಾಳಿಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ಸಾರ್ ಪೇಟ್ರೋಲ್ ಬಂಕ್ ಬಳಿ ನಡೆದಿದೆ. ಹುಲವಂಗಲ ಗ್ರಾಮದ ಗ್ರಾಪಂ ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪುಟ್ಟಸಂದ್ರದ ರೈ ಸೋಮಣ್ಣ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಕೇನಹಳ್ಳಿ ಗ್ರಾಮದ ಜಯಪ್ರಕಾಶ ಮತ್ತು ಶರತ್ಗೆ ಗಾಯವಾಗಿದ್ದು, ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಎಸ್ಸಾರ್ ಪೆಟ್ರೋಲ್ ಬಂಕಿನ ಸಮೀಪದ ಆಲದಮರದಲ್ಲಿದ್ದ ನಾಲ್ಕು ಹೆಜ್ಜೇನು ಗೂಡಿದ್ದು, ಇತ್ತೀಚೆಗೆ ಸಾಕಷ್ಟು ಜನರ ಮೇಲೆ ದಾಳಿ ನಡೆದಿದೆ. ಸ್ಥಳಕ್ಕೆ ಕೊರಟಗೆರೆ ತಹಶೀಲ್ದಾರ್ ನಹೀದಾ, ಕೋಳಾಲ ಪಿಎಸೈ ಮಹಾಲಕ್ಷ್ಮಿ ಭೇಟಿ ನೀಡಿದ್ದಾರೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.