News Karnataka Kannada
Friday, May 03 2024
ತುಮಕೂರು

ತುಮಕೂರು: ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ತನ್ನ ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ ಕೇರಳ ಕೋರ್ಟ್ 40 ವರ್ಷಮತ್ತು 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ಆದೇಶಿಸಿದೆ.
Photo Credit : IANS

ತುಮಕೂರು : ಸರಿಯಾಗಿ ಓದಲಿಲ್ಲ ಎಂದು ಶಾಲಾ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಭಾರತ್​ ಮಾತಾ ಶಾಲೆ ಶಿಕ್ಷಕಿ ರಹತ್​ ಫಾತಿಮಾ ಶಿಕ್ಷೆಗೆ ಗುರಿಯಾದವರು. 2011ರ ಫೆ.17ರಂದು ಸರಿಯಾಗಿ ಓದಲಿಲ್ಲವೆಂದು 7 ವರ್ಷದ ಬಾಲಕಿಗೆ ಕೋಲಿನಿಂದ ಹೊಡೆದ ಪರಿಣಾಮ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು. ಈ ಸಂಬಂಧ ತಿಲಕ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಠಾಣಾ ಪಿಎಸ್​ಐ ಆಗಿದ್ದ ದಿನೇಶ್​ ಪಾಟೀಲ್​ ಆರೋಪಿ ಶಿಕ್ಷಕಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆ 325ರ ಅಡಿಯಲ್ಲಿ ಶಿಕ್ಷಕಿ ಅಪರಾಧವೆಸಗಿರುವುದು ಸಾಬೀತಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಸಿವಿಲ್​ ಹಾಗೂ ಜೆಎಂಎಸಿ ಕೋರ್ಟ್​ನ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷಕಿಗೆ 3 ವರ್ಷ ಕಠಿಣ ಸಜೆ, 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಿ.ಬಸವರಾಜು ವಾದ ಮಂಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು