ಬೆಂಗಳೂರು: ಮಹಿಳಾ ಪಿಎಸ್ಐ ಅಧಿಕಾರಿಗೆ ಮತ್ತೊಬ್ಬ ಪಿಎಸ್ಐ ಅಧಿಕಾರಿ ಮದುವೆ ಆಗುವಂತೆ ಧಮ್ಕಿ ಹಾಕಿದ್ದಾನೆ. ಮಹಿಳಾ ಪಿಎಸ್ಐ ಜತೆಗಿನ ಫೋಟೊ ಸೆರೆಹಿಡಿದು ಮದುವೆ ಆಗು ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮಹಿಳಾ ಪಿಎಸ್ಐ (28) ಇವರು ದೂರಿನ ಆಧಾರದ ಆರೋಪಿ ಸಂಜಯ್(34) ನನ್ನು ಬಂಧಿಸಲಾಗಿದೆ.
ಈ ಹಿಂದೆ ತರಭೆತಿ ಪಡೆಯುವ ವೇಳೆ ಪ್ರೇಮ ನಿವೇಧನೆ ಮಾಡಿಕೊಂಡಿದ್ದ ಈತನನ್ನು ಮಹಿಳೆ ನಿರಾಕೆರಿಸಿದ್ದಳು.ಆದರೆ ಆಕಯ ಹಿಂದೆ ಬಿಡದ ಆತ ನಿಮ್ಮನ್ನು ನಾನು ಐಎಎಸ್ ಆದಮೇಲೆ ವಿವಾಹ ಮಾಡಿಕೊಳ್ಳುತ್ತೆನೆ ಹಾಗಾಗಿ ನನಗೆ ಓದಲು ಹಣದ ಸಹಾಯ ಕೇಳಿದ್ದ ಈ ನಪ ಇಟ್ಟುಕೊಂಡು ಹತ್ತಿರವಾಗಿದ್ದ ಈತನಿಗೆ 2020ರಲ್ಲಿ 5.50 ಲಕ್ಷ ನೀಡಿರುವುದಾಗಿ ಆಕೆ ಆರೋಪಿಸಿದ್ದಾಳೆ.
ಓದುವ ನೆಪದಲ್ಲಿ ಹತ್ತಿರವಾದ ಸಂಜಯ್, ತನಗೆ ತಿಳಿಯದೆ ಆತನ ಜತೆಗೆ ಇರುವ ಫೋಟೋ ತೆಗೆದುಕೊಂಡಿದ್ದಾನೆ. ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ ಸಂಜಯ್, ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಕಳೆದ ಮಾ.11ರಂದು ಸಂಜಯ್ ಏಕಾಏಕಿ ನಮ್ಮ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ ಎಂದು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದ್ದು.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.