News Karnataka Kannada
Sunday, May 05 2024
ಬೆಂಗಳೂರು

ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ

Student harassed in bus, abused for refusing to give free ticket
Photo Credit : News Kannada

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಹಾಡಹಗಲೇ ಕಂಡೆಕ್ಟರ್ ಹಾಗೂ ಇಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ನಡೆದಿದೆ.

9 ನೇ ತರಗತಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚ್ಮಂಡ್ ಸರ್ಕಲ್‍ಗೆ ಪ್ರಯಾಣ ಮಾಡುತ್ತಿದಳು. ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಗೆ ಅಂತ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹ ಇದ್ದಿದ್ದಕ್ಕೆ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡುವಂತೆ ಕಂಡೆಕ್ಟರ್ ಹೇಳಿದ್ದಾರೆ.

ವಿದ್ಯಾರ್ಥಿನಿ ದುಡ್ಡು ಕೊಟ್ಟು ಟಿಕೆಟ್ ಪಡೆದ್ರೂ, ವಿದ್ಯಾರ್ಥಿನಿಯ ಆಧಾರ್ ತೊಗೊಂಡು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ಮುಂದೆ ನಿಂದಿಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಕಂಡೆಕ್ಟರ್ ಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ರಿಚ್ಮಂಡ್ ಸರ್ಕಲ್ ನಲ್ಲಿ ಇಳಿಸದೇ, ಕಾರ್ಪೋರೇಶನ್ ಸರ್ಕಲ್ ಬಳಿ  ಇಳಿಸಿ ಹೋಗಿದ್ದಾರೆ.

ಬಳಿಕ ಮನೆ ತಲುಪಿದ ವಿದ್ಯಾರ್ಥಿಯು ತನ್ನ ತಾಯಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಹಾಗಾಗಿ ತಾಯಿ ಕಂಡೆಕ್ಟರ್, ಹಾಗೂ ಪ್ರಯಾಣಿಕರ ವಿರುದ್ಧ ಪೊಲೀಸ್ ಠಾಣೆಯಲ್ಲು ದೂರು ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು