ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಾಮೀನು ಮಂಜೂರಾಗಿತ್ತು. ಪಿಡಿಜೆ ಕೋರ್ಟ್ ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಲಾಗಿತ್ತು. ಹಾಗಾಗಿ ಸೋನು ಶ್ರೀನಿವಾಸ್ ಗೌಡ ಇಂದು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ ವಿಚಾರವಾಗಿ ಬ್ಯಾಡರಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಾರ್ಚ್ 22ರಂದು ಸೋನುವನ್ನು ಬಂಧಿಸಿದ್ದರು. ಪೊಲೀಸರು ಹಾಗೂ CWC ಅಧಿಕಾರಿಗಳಿಂದ ಸೋನು ವಿಚಾರಣೆ ನಡೆದಿತ್ತು.
ನಾನು ಮಗು ಕರೆದುಕೊಂಡು ಬಂದು 15 ದಿನ ಆಗಿದೆ. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ತಪ್ಪಾಗಿದೆ ಅಂತ ನನಗೆ ಗೊತ್ತಿಲ್ಲ. ಗೊತ್ತಿದ್ದರೆ, ನಾನು ಪ್ರೊಸಿಜರ್ ಮೂಲಕವೇ ದತ್ತು ಮಾಡಿಸಿಕೊಳ್ಳುತ್ತಿದ್ದೆ. ನಾನು ತಪ್ಪು ಮಾಡದಿದ್ದರೂ ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಅವರನ್ನು ಪೊಲೀಸರು ಕಸ್ಟಡಿಗೆ ಪಡೆದು ನ್ಯಾಯಾಂಗ ಬಂಧನ ನೀಡಲಾಗಿತ್ತು.