ಬೆಂಗಳೂರು : ಸಿಗರೇಟ್ ನ ದುಡ್ಡು ಕೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕ ಹಾಗೂ ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ. ಕುಡಿದ ಮತ್ತಿನಲ್ಲಿ ಇಬ್ಬರು ಪುಂಡರು ಹಲ್ಲೆ ಮಾಡಿದ್ದಾರೆ.
ರಾತ್ರಿ 9.30 ರ ಸುಮಾರಿಗೆ ಗ್ಯಾಲಕ್ಸಿ ಕಾಂಡಿಮೆಂಟ್ಸ್ ಬಳಿ ಬಂದಿದ್ದ ಮಂಜೇಶ್ ಅಲಿಯಾಸ್ ಬೆಣ್ಣೆ ಮತ್ತು ಸ್ನೇಹಿತ ಕಾಂಡಿಮೆಂಟ್ಸ್ ಮಾಲೀಕ ರಾಜು ಬಳಿ ಸಿಗರೇಟ್ ಕೇಳಿದ್ದಾರೆ. ಆದರೆ ಹಣ ಕೊಡದೆ ಅವಾಜ್ ಹಾಕಿ ರೌಡಿಸಂ ತೋರಿದ್ದಾರೆ. ಅಲ್ಲದೆ ಹಣ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ.
ಮಾಲೀಕ ರಾಜು ಹಾಗೂ ಅಲ್ಲಿಯೇ ಇದ್ದ ಮತ್ತೊಬ್ಬ ಗ್ರಾಹಕನನ್ನು ರಸ್ತೆಯಲ್ಲಿ ಎಳೆದಾಡಿ ಪುಂಡರು ಹಲ್ಲೆ ನಡೆಸಿದ್ದಾರೆ. ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಡ್ಯಾಗರ್ ತೆಗೆದು ಬೆದರಿಸಿ ಅಂಗಡಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಸದ್ಯ ಘಟನೆ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

