ರಾಮನಗರ: ಟೀ ಕುಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ರಾಮನಗರದಲ್ಲಿ ನಡೆದಿದೆ.ಅಣ್ಣ ಎಂದು ಪರಿಚಯಿಸಿಕೊಂಡು 15 ವರ್ಷದ ಬಾಲಕಿಯನ್ನು ಹಾಸ್ಟೆಲ್ನಿಂದ ಕರೆದುಕೊಂಡು ಹೋದ ವ್ಯಕ್ತಿ ಬಾಲಕಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದೀಗ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅವನನ್ನು ಬಂಧಿಸಲಾಗಿದೆ.
ಅಣ್ಣ ಎಂದು ಪರಿಚಯಿಸಿಕೊಂಡು ಹಾಸ್ಟೆಲ್ ಗೆ ಬಂದ 36 ರವರ್ಷದ ವ್ಯಕ್ತಿ ಟೀ ಕುಡಿಸಿಕೊಂಡು ಬರುತ್ತೇನೆ ಎಂದು ಹೇಳಿದವನು ಮಾವಿನ ತೋಪಿಗೆ ಕರೆದೊಯ್ದು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ.ಎರಡು ತಾಸಾದರು ಬಾಲಕಿ ಹಿಂತುರುಗದ ಕಾರಣ ಹಾಸ್ಟೆಲ್ ಸಿಬ್ಬಂಧಿ ಮನೆಗೆ ಕರೆ ಮಾಡಿ ತಿಳಿಸಿದ್ದಾರೆ.
ಅಲ್ಲದೇ, ಆತನ ಹಾವಭಾವ ಗಮನಿಸಿದ್ದ ಸಿಂಬಂದಿಗೆ ಅನುಮಾನ ಬಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಂತರ ತಕ್ಷಣವೇ ಪೊಲೀಸರಿಗೆ ಮಾವಿನ ತೋಪಿಗೆ ಕರೆದೊಯ್ದುದಿರುವುದು ತಿಳಿದ ಸ್ಥಳಕ್ಕೆ ತೆರಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಅಲ್ಲದೇ ಬಾಲಕಿಯನ್ನು ಒಂದು ವರ್ಷದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಅರೋಪ ಕೇಳಿ ಬಂದಿದೆ.ಇದೀಗ ರಾಮನಗರ ಪೊಲೀಸ್ ವ್ಯಕ್ತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ಕೂಡ ದಾಖಲಿಸಿದ್ದಾರೆ.