News Karnataka Kannada
Monday, April 29 2024
ರಾಮನಗರ

ರಾಮನಗರ: ವಿದ್ಯುತ್ ಸ್ಪರ್ಶಿಸಿ ಆನೆ ಸಾವು

Wild Elephent Mysore 14082021
Photo Credit :

ರಾಮನಗರ: ಗಣೇಶ ಚತುರ್ಥಿ ಹಬ್ಬದಂದೇ ಆನೆಯೊಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.

ತೆಂಗಿನಕಲ್ಲು ಅರಣ್ಯ ವಲಯದ ಮಲ್ಲಂಗೆರೆ ಗ್ರಾಮದ ಎನ್.ಆರ್. ಕಾಲೋನಿ ಬಳಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಗಂಡು ಆನೆ ಮೃತಪಟ್ಟಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಗಜಪಡೆಯಲ್ಲಿ ಅಂದಾಜು 35 – 40 ವರ್ಷದ ಈ ಆನೆಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ನೋವಿನಿಂದ ಕಿರುಚಿದ್ದಾಡಿದ್ದು, ಇತರ ಆನೆಗಳು ಸ್ಥಳದಿಂದ ಕಾಲ್ಕಿತ್ತೀವೆ.

ಇತ್ತೀಚಿಗೆ ಕಳೆದ ತಿಂಗಳು ಕಬ್ಬಾಳು ಅರಣ್ಯದಲ್ಲಿ 35 ವರ್ಷದ ಗಂಡಾನೆ ಮೃತಪಟ್ಟಿತ್ತು. ಈ ಬೆನ್ನಲ್ಲೆ ಈ ಆನೆ ಕೂಡ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ. ಸ್ಥಳದಲ್ಲೆ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ಕೂಡ ಮಾಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು