News Karnataka Kannada
Saturday, April 27 2024
ರಾಮನಗರ

‘ಮೇಕೆದಾಟು ಪಾದಯಾತ್ರೆ’ಯಲ್ಲಿ ಪಾಲ್ಗೊಂಡಿರುವ ‘ನಾಯಕ ಸಿದ್ಧರಾಮಯ್ಯ’ಗೆ ಜ್ವರ

Siddaramaih
Photo Credit :

ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ತೊಡಿಗಿರುವಂತ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೂ ಜ್ವರ  ಕಾಣಿಸಿಕೊಂಡಿದೆ.ಹೀಗಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿರೋದಾಗಿ ತಿಳಿದು ಬಂದಿದೆ.

 ರಾಮನಗರದ ಕನಕಪುರದ ಸಂಗಮ ಕ್ಷೇತ್ರದಿಂದ ಆರಂಭವಾದಂತ ಪಾದಯಾತ್ರೆ, ಈಗ ಹೆಗ್ಗನೂರು ತಲುಪಿದೆ. ಇಲ್ಲಿಯವರಿನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಂತ ಮಾಜಿ ಸಿಎಂ ಸಿದ್ಧರಾಮಯ್ಯಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಹೆಗ್ಗನೂರಿನಲ್ಲಿ ವೈದ್ಯರಿಂದ ಪರೀಕ್ಷೆಗೆ ಒಳಪಟ್ಟರು.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಪರೀಕ್ಷೆ ನಡೆಸಿದರು. ಪಾದಯಾತ್ರೆಯನ್ನು ಬಿಸಿಲಿನಲ್ಲಿಯೂ ನಡೆಸಿದ್ದರಿಂದ ಜ್ವರ ಬಂದಿರಬಹುದು ಎಂಬುದಾಗಿ ತಿಳಿಸಿರುವಂತ ವೈದ್ಯರು, ವಿಶ್ರಾಂತಿ ತೆಗೆದುಕೊಳ್ಳೋದಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಬೆಂಗಳೂರಿನತ್ತ ವಾಪಾಸ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು