Categories: ರಾಮನಗರ

ಬಿಡದಿಯಲ್ಲಿ ಕ್ರೈಸ್ತರಿಂದ ಗರಿ ಹಬ್ಬಾಚರಣೆ

ರಾಮನಗರ: ಏಸು  ಕ್ರಿಸ್ತನನ್ನು ಶಿಲುಬೆಗೆ ಏರಿಸುವ ಮುನ್ನ ಜನರು ಗರಿಗಳನ್ನು ಹಿಡಿದು ಸ್ವಾಗತಿಸಿದ್ದ ಸ್ಮರಣಾರ್ಥವಾಗಿ ಬಿಡದಿಯಲ್ಲಿ ಕ್ರೈಸ್ತ ಬಾಂಧವರು ಗರಿಗಳನ್ನಿಡಿದು ಬೈಕ್  ರಾಲಿ ನಡೆಸುವ ಮೂಲಕ ಗರಿ ಹಬ್ಬವನ್ನು ವಿಜೃಂಭಣೆಯಿಂದ  ಆಚರಿಸಿದರು.

ಬಿಡದಿಯ ಬಿಜಿಎಸ್ ವೃತ್ತದ ಬಳಿ ಭಾನುವಾರ ಕುಟುಂಬ ಸಮೇತರಾಗಿ ಜಮಾಯಿಸಿದ ನೂರಾರು ಕ್ರೈಸ್ತರು ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತನನ್ನು ಸ್ಮರಿಸುತ್ತಾ ಬೈಕ್‌ಗಳಲ್ಲಿ ಮೆರವಣಿಗೆ ನಡೆಸಿದರು. ಬಿಡದಿಯ ಬಿಜಿಎಸ್ ವೃತ್ತದಿಂದ ಹೊರಟ ಬೈಕ್ ರ್‍ಯಾಲಿ ಮೆರವಣಿಗೆಯು ಬೆಂಗಳೂರು – ಮೈಸೂರು ಹೆದ್ದಾರಿಯ ಮೂಲಕ ಲಕ್ಷ್ಮೀಸಾಗರ ಗೇಟ್ ಬಳಿಯಿರುವ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರ ದೇವಾಲಯದವರೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರ ದೇವಾಲಯದ ಧರ್ಮಗುರು ಫಾದರ್ ಅಭಿಷೇಕ್ ದೇವ ಅವರು ಮಾತನಾಡಿ,  ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಗುಡ್ ಫ್ರೈಡೆ ಎಂದು ಪ್ರಪಂಚದಾದ್ಯಂತ ಕ್ರೈಸ್ತರು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಏಸುವನ್ನು ಶಿಲುಬೆಗೆ ಏರಿಸುವ ಐದು ದಿನಗಳ ಮುನ್ನ ಯೆರೋಸಲೆಮ್ ಎಂಬ ಪಟ್ಟಣಕ್ಕೆ ಏಸು ಕ್ರಿಸ್ತ ಭೇಟಿ ನೀಡಿದ್ದ ಸಂದರ್ಭದಲ್ಲಿ ಆತನ ಶಿಷ್ಯರು ಮತ್ತು ಜನರು ತಾವು ಧರಿಸಿದ್ದ ಬಟ್ಟೆಗಳನ್ನು ದಾರಿಯಲ್ಲಿ ಹಾಸಿ ಮತ್ತು ತೆಂಗಿನ ಗರಿಗಳನ್ನು ಹಿಡಿದು ಸ್ವಾಗತಿಸಿದ್ದರು.

ಏಸು ಕ್ರಿಸ್ತ ತಮ್ಮ ಪಟ್ಟಣಕ್ಕೆ ಬಂದಿದ್ದಕ್ಕಾಗಿ ಸಂತೋಷದಿಂದ ಕುಣಿದು ಕುಪ್ಪಳಿಸಿದ ಜನರು ತಾವು ಕಂಡಿದ್ದ ಎಲ್ಲಾ  ಮಹತ್ಕಾರ್ಯಗಳ ವಿಷಯದಲ್ಲಿ, ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಮಂಗಳ, ಮೇಲಣ ಲೋಕದಲ್ಲಿ ಮಹಿಮೆ ಎಂದು ಜೋರಾದ ಶಬ್ದಗಳಿಂದ ಅವರನ್ನು ಕೊಂಡಾಡಿದರು. ಇದರ ಸವಿನೆನಪಿಗಾಗಿ ಗರಿಗಳ ಭಾನುವಾರವೆಂದು ವಿಶ್ವದಾಧ್ಯಂತ ಕ್ರೈಸ್ತರು ಗರಿಗಳ ಹಬ್ಬವನ್ನಾಗಿ ಆಚರಿಸುತ್ತಾ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಡದಿಯಲ್ಲಿ ಗರಿಗಳ ಭಾನುವಾರವನ್ನು ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು ಗರಿಗಳನ್ನು ಹಿಡಿದು ಏಸುವನ್ನು ಸ್ಮರಿಸಿ ಪಾರ್ಥನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Sneha Gowda

Recent Posts

ಕದ್ದ ಬೈಕ್ ಪಾರ್ಕಿಂಗ್‌ ಮಾಡಿ ಪರಾರಿ : 30 ಬೈಕ್‍ ಪೊಲೀಸರ ವಶಕ್ಕೆ

ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್‌ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪಾರ್ಕ್…

13 mins ago

ಬಿಸಿ ಗಾಳಿಗೆ ಕರ್ನಾಟಕದ ಜನ ತತ್ತರ; ಯಾವಾಗ ಮಳೆ ?

ಸೂರ್ಯನ ಶಾಖಕ್ಕೆ ರಾಜ್ಯ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನ ಉರಿ ಶೆಕೆ ಜನರನ್ನ ತತ್ತರಿಸಿದೆ. ಈಗಾಗಲೇ ದಾಖಲೆ ಬರೆದಿರೋ ತಾಪಮಾನ…

41 mins ago

ರಾಕ್ಷಸನಂತೆ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

ಸಾಲದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ಜಗಳದಲ್ಲಿ ವ್ಯಕ್ತಿಯೊಬ್ಬ ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು…

1 hour ago

ಇಂದಿನಿಂದ ವನಿತಾ ಟಿ20 ಕ್ರಿಕೆಟ್‌ ಸರಣಿ ಆರಂಭ

ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ವನಿತಾ ತಂಡಗಳ ನಡುವಿನ ವನಿತಾ ಟಿ20 ಕ್ರಿಕೆಟ್‌ ಸರಣಿ ಇಂದಿನಿಂದ ಸಿಲ್ಹೆ ಟ್‌ನಲ್ಲಿ ಆರಂಭವಾಗಲಿದೆ.…

1 hour ago

ಹೆಚ್ಚಾದ ಬಿಸಿಲ ಬೇಗೆ; ಗಗನಕ್ಕೇರಿದ ತರಕಾರಿ ಬೆಲೆ

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆ ಭಾರಿ ದುಬಾರಿಯಾಗಿದೆ. ಬೀನ್ಸ್ ದರ…

2 hours ago

ಚಿನ್ನದ ಬೆಲೆ ಗ್ರಾಮ್​ಗೆ 130 ರೂನಷ್ಟು ಇಳಿಕೆ; ಇವತ್ತಿನ ಬೆಲೆಗಳೆಷ್ಟು?

ಮೂರ್ನಾಲ್ಕು ವಾರ  ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿವೆ. ಬೆಳ್ಳಿ ಬೆಲೆ ಕಳೆದ…

2 hours ago