Categories: ರಾಮನಗರ

ಮೋದಿಯನ್ನು ಬಿಟ್ಟರೆ ಬೇರೆ ಯಾರಿಗೂ ದೇಶದ ಪ್ರಧಾನಿಯಾಗುವ ಯೋಗ್ಯತೆ ಇಲ್ಲ: ದೇವೇಗೌಡ

ಹಾರೋಹಳ್ಳಿ: ಮೋದಿ ಬಿಟ್ಟರೆ ಯಾರಿಗೂ ಈ ದೇಶದ ಪ್ರಧಾನಿಯಾಗುವ ಯೋಗ್ಯತೆ ಇಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ಅವರು ಮರಳವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ, ತಮ್ಮ ಅಳಿಯ ಸಿ.ಎನ್. ಮಂಜುನಾಥ್ ಪರವಾಗಿ ಇಂದು ಮತಯಾಚನೆ ನಡೆಸಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಅವರಿಗೆ (ಡಿ.ಕೆ ಸಹೋದರರಿಗೆ) ಸೆಡ್ಡು ಹೊಡೆಯಬೇಕು. ಯಾರಿಗೂ ಹೆದರಬೇಡಿ. ಅವರ ಹೆಸರು ಹೇಳುವುದಿಲ್ಲ.

ಈ ಸಲ ಅವರ ಅಂತ್ಯ ಆಗಲೇಬೇಕು ಎಂಬ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಒತ್ತಾಯದ ಮೇರೆಗೆ ಡಾ. ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಹಾಗಾಗಿ, ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಅವರು ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರಚನೆ ಮಾಡಿ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಅಂದರೆ ಅದು ಕುಮಾರಸ್ವಾಮಿ. ಮೋದಿ ಅವರು, ಮಂಡ್ಯಡಲ್ಲಿ ಕುಮಾರಸ್ವಾಮಿಯನ್ನು ನಿಲ್ಲಿಸಲು ಹೇಳಿದರು. ಕೇಂದ್ರದಲ್ಲಿ ಅವರ ಸೇವೆ ಬಳಸಿಕೊಳ್ಳಲು ಅಲ್ಲಿ ಅವರನ್ನು ನಿಲ್ಲಿಸಲಾಗಿದೆ ಎಂದರು.

ಡಾ. ಮಂಜುನಾಥ್ 8 ಲಕ್ಷ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅವರ ಸೇವೆಯನ್ನು ಮೋದಿ ಮತ್ತು ಅಮಿತ್ ಶಾ ಅವರು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳುವುದಕ್ಕಾಗಿ, ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಚುನಾವಣೆಗೆ ನಿಲ್ಲಿಸಲು ಒಪ್ಪಿಸಿದರು. ಜನಸೇವೆ ಮಾಡಿ ಮನೆ‌ ಮಾತಾಗಿರುವ ಪ್ರಾಮಾಣಿಕ ಮಂಜುನಾಥ್ ಅವರಿಗೆ ಜನ ಮತ ನೀಡಬೇಕು ಎಂದರು.

Chaitra Kulal

Recent Posts

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

4 mins ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

17 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

36 mins ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

44 mins ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

50 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

1 hour ago