ರಾಮನಗರ: ಪಟ್ಟಲದಮ್ಮ ದೇವಿ ಜಾತ್ರೆಯಲ್ಲಿ ಕೊಂಡೋತ್ಸವ ವೇಳೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಅರ್ಚಕರೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ರಾಜು ಗಾಯಗೊಂಡವರು. ಗ್ರಾಮದೇವತೆ ಪಟ್ಟಲದಮ್ಮ ದೇವಿಯ ಜಾತ್ರೆ ಅಂಗವಾಗಿ ಕೊಂಡೋತ್ಸವ ನಡೆಯುವ ಸಂದರ್ಭದಲ್ಲಿ ಕೊಂಡ ಹಾಯುತ್ತಿದ್ದ ಅರ್ಚಕ ರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಭಕ್ತರು ಅವರನ್ನು ರಕ್ಷಿಸಿದ್ದಾರೆ. ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.