News Karnataka Kannada
Saturday, May 04 2024
ರಾಮನಗರ

ಕುಸಿದು ಬಿದ್ದ ಶಾಲಾ ಕಾಂಪೌಂಡ್ ದುರಸ್ತಿಗೆ ಆಗ್ರಹ

Mysore
Photo Credit :

ರಾಮನಗರ: ಕಳಪೆ ಕಾಮಗಾರಿಯಿಂದ ಸರಕಾರಿ ಶಾಲೆ ಕಾಂಪೌಂಡ್ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಇಟ್ಟಮಾಡು ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ಗುತ್ತಿಗೆದಾರನಿಂದಲೇ ಕಾಂಪೌಂಡ್ ಮರು ನಿರ್ಮಾಣ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬಿಡದಿ ಪುರಸಭೆ 22ನೇ ವಾರ್ಡ್ ವ್ಯಾಪ್ತಿಯ ಇಟ್ಟಮಡು ಗ್ರಾಮದಲ್ಲಿರುವ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕಳಪೆ ಕಾಮಗಾರಿಯಿಂದ ಇತ್ತೀಚೆಗೆ ನೆಲಕ್ಕುರುಳಿದೆ. ಸುಮಾರು ನೂರು ಅಡಿಗೂ ಹೆಚ್ಚು ವಿಸ್ತೀರ್ಣದ ಶಾಲಾ ಕಾಂಪೌಂಡ್ ಅಲ್ಲಲ್ಲಿ ಬಹುತೇಕ ಬಿರುಕು ಬಿಟ್ಟಿದ್ದು ಆಗಲೋ ಈಗಲೋ ಉರುಳಿ ಬೀಳುವ ಹಂತದಲ್ಲಿದೆ. ಶಾಲೆಯ ಹಿಂಭಾಗದಲ್ಲಿ ಈಗಾಗಲೇ ಕುಸಿದುಬಿದ್ದಿದೆ. ಆದರೆ ಇದುವರೆಗೂ ಕಾಂಪೌಂಡ್ ಗೋಡೆಯನ್ನು ದುರಸ್ತಿಗೊಳಿಸಲು ಯಾರೂ ಮುಂದಾಗದ ಕಾರಣ ಶಾಲೆಗೆ ಭ್ರದತೆ ಇಲ್ಲದಂತಾಗಿದೆ.

2012-13ನೇ ಸಾಲಿನಲ್ಲಿ ಶಾಲಾಭಿವೃದ್ಧಿ ನಿಧಿಯಡಿ ಶಾಲಾ ಕಾಂಪೌಂಡ್ ಗೋಡೆ ಹಾಗೂ ಮಕ್ಕಳಿಗೆ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಗುಣಮಟ್ಟವಿಲ್ಲದ ಕಾಮಗಾರಿಯಿಂದ ಕಾಂಪೌಂಡ್ ಮತ್ತು ಶೌಚಾಲಯದ ಗೋಡೆಗಳು ಅಲ್ಪಾವಧಿಯಲ್ಲಿಯೇ ಬಿರುಕು ಬಿಟ್ಟಿವೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯ ಅರ್ಧ ಭಾಗದಷ್ಟು ಕುಸಿದು ಬಿದ್ದಿದೆ. ಇನ್ನುಳಿದ ಗೋಡೆಯೂ ಅಪಾಯದ ಅಂಚಿನಲ್ಲಿದ್ದು ಶಾಲಾ ಆವರಣದಲ್ಲಿ ಹಾಗೂ ಕಾಂಪೌಂಡ್ ಆಸುಪಾಸಿನಲ್ಲಿ ಮಕ್ಕಳು ಆಟವಾಡುವುದರಿಂದ ಶಿಕ್ಷಕರಲ್ಲಿ ಆತಂಕವುಂಟಾಗಿದೆ.

ಶಾಲೆಯ ಹಿಂಭಾಗದಲ್ಲಿ ಕಾಂಪೌಂಡ್ ಗೋಡೆ ಉರುಳಿರುವುದಿಂದ ಬೀದಿ ನಾಯಿಗಳು ರಾಜಾರೋಷವಾಗಿ ಶಾಲೆಯ ಅಂಗಳದೊಳಕ್ಕೆ ನುಸುಳುತ್ತವೆ. ಅಲ್ಲದೆ ಶಾಲೆಯ ಮಗ್ಗುಲಲ್ಲಿ ಖಾಸಗಿಯವರ ತೋಟ ಇರುವುದರಿಂದ ವಿಷ ಜಂತುಗಳು ಒಳಗೆ ಸುಳಿಯಬಹುದೆಂಬ ಭಯವೂ ಕಾಡುತ್ತಿದೆ. ಕಾಂಪೌಂಡ್ ಉರುಳಿ ಬಿದ್ದಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ.

ಹೀಗಾಗಿ ಶೀಘ್ರವೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಂಪೌಂಡ್ ಮತ್ತು ಶೌಚಾಲಯ ಗೋಡೆ ದುರಸ್ಥಿಗೊಳಿಸುವಂತೆ ಹಾಗೂ ಈ ಅವಘಡಕ್ಕೆ ಕಾರಣರಾದ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು