ಬೆಂಗಳೂರು: ಇದೀಗ ವಿಧಾನಸೌದದಲ್ಲಿ ನಡೆದ ರಾಜ್ಯಸಭದ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ನಸೀರ್ ಹುಸೇನ್ ಬೆಂಬಲಿಗರು ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕೂಗಿರುವುದಾಗಿ ಆರೋಪಿಸಲಾಗಿದ್ದು ಈ ಕುರಿತು ಸ್ಪಷ್ಟನೆ ಪಡೆಯಲು ಎಫ್ಎಸ್ಎಲ್ಗೆ ವೀಡಿಯೋ ಕಳುಹಿಸಲು ಪೊಲೀಸರ ತಯಾರಿ ನೆಡಸಿದ್ದಾರೆ.
ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕುರಿತಾಗಿ ಪೋಲಿಸರಿಗೆ ಇನ್ನೂ ಸ್ಪಷ್ಟನೆ ಸಿಗದ ಕಾರಣ ಮಾಧ್ಯಮಗಳಿಂದ ಘೋಷಣೆ ಸಂಬಂಧ ಪಟ್ಟ ವಿಡಿಯೋ ಪಡೆದು ಪರಿಶೀಲನೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸುದ್ದಿ ಭಿತ್ತರಿಸಿದ ಪ್ರತಿ ಮಾಧ್ಯಮಗಳಿಂದ ವೀಡಿಯೋಗಳನ್ನು ಪಡೆದು ಎಫ್ಎಸ್ಎಲ್ಗೆ ಕಳಿಸಿಕೊಡಲು ಪೊಲೀಸರು ಪೂರ್ಣ ಸಿದ್ಧತೆ ನಡೆಸಿದ್ದಾರೆ.