News Karnataka Kannada
Saturday, May 18 2024
ಬೆಂಗಳೂರು

ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ ಅಧಿಕಾರಿಯ ವಿಡಿಯೊ ವೈರಲ್‌

Photo Credit : News Kannada

ಬೆಂಗಳೂರು: ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ತಂಡದ ಜತೆಗೆ ಕಾಡಿನ ರಸ್ತೆಯ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ. ಈ ತಂಡ ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಬರೋಬ್ಬರಿ ಎರಡು ಟ್ರಕ್ ಲೋಡ್ ಪ್ಲಾಸ್ಟಿಕ್ ಸಂಗ್ರಹಿಸಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

“ಸಾವಯವ ವಸ್ತುಗಳಿಂದ ಆವೃತವಾಗಬೇಕಾದ ಅರಣ್ಯ ಪ್ರದೇಶವು ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿಕೊಂಡಿದೆ. ವನ್ಯ ಜೀವಿಗಳು ಮತ್ತು ಸಾಕು ಪ್ರಾಣಿಗಳು ಆಹಾರವೆಂದು ಭಾವಿಸಿ ಈ ಪ್ಲಾಸ್ಟಿಕ್ ತುಂಡುಗಳನ್ನು ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅವುಗಳ ಪ್ರಾಣಕ್ಕೂ ಸಂಚಾಕಾರ ತರುತ್ತವೆ” ಎಂದು ಪರ್ವೀನ್ ಕಸ್ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಡಂಚಿನ ರಸ್ತೆಯಲ್ಲಿ ಹಲವು ಜನರನ್ನೊಳಗೊಂಡ ಗುಂಪು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಟ್ರಕ್‌ಗೆ ತುಂಬಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ʼʼವಾಕಿಂಗ್‌ / ಜಾಗಿಂಗ್‌ ಮಾಡುತ್ತ ತ್ಯಾಜ್ಯ ಸಂಗ್ರಹಿಸುವ ಪ್ಲಾಗಿಂಗ್ ಇದು. ಕಾಡಂಚಿನ ರಸ್ತೆಯಿಂದ ಇಂದಿನ 7 ಕಿ.ಮೀ. ವಾಕಿಂಗ್‌/ ಜಾಗಿಂಗ್ ಮೂಲಕ ಎರಡು ಟ್ರಕ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಮಾನವ ಎಂದಿಗೂ ಬುದ್ಧಿ ಕಲಿಯುವುದೇ ಇಲ್ಲ. ಎಲ್ಲೆಂದರಲ್ಲಿ ಕಸ ಎಸೆದು ಅನಾಗರಿಕರಂತೆ ವರ್ತಿಸುವುದನ್ನು ನಿಲ್ಲಿಸುವುದೇ ಇಲ್ಲ. ನೀವು ಯಾವಾಗ ಪ್ಲಾಗಿಂಗ್‌ ಕೈಗೊಳ್ಳುತ್ತೀರಿ?ʼʼ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು