ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಲೇಖಕಿ ಸುಧಾ ಮೂರ್ತಿ ದಂಪತಿ ಮತ್ತೊಮ್ಮೆ ಅಜ್ಜ-ಅಜ್ಜಿ ಆಗಿದ್ದಾರೆ. ಪುತ್ರ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ದಂಪತಿಗೆ ಗಂಡು ಮಗುವೊಂದು ಜನಿಸಿದೆ. ನವೆಂಬರ್ 10ರಂದು ಬೆಂಗಳೂರಿನಲ್ಲಿ ಅಪರ್ಣಾ ಕೃಷ್ಣನ್ ಮಗುವಿಗೆ ಜನ್ಮ ನೀಡಿದ್ದಾರೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗೆ ಈಗಾಗಲೇ ಮೊಮ್ಮಕ್ಕಳಿದ್ದಾರೆ. ಪುತ್ರಿ ಅಕ್ಷತಾ ಮೂರ್ತಿ ಮತ್ತು ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಗುವಿಗೆ ಏಕಾಗ್ರಹ್ ಎಂದು ಹೆಸರಿಡಲಾಗಿದೆ. ಸಂಸ್ಕೃತ ಪದವಾದ ಇದರ ಅರ್ಥ ಅಚಲ ಗಮನ ಮತ್ತು ಏಕಾಗ್ರತೆ. ರೋಹನ್ ಮೂರ್ತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್ಡಿ ಪಡೆದಿದ್ದಾರೆ. ರೋಹನ್ ಮೂರ್ತಿ ಯುಎಸ್ ಮೂಲದ ಸಾಫ್ಟ್ವೇರ್ ಅಭಿವೃದ್ಧಿ ಸಂಸ್ಥೆ ಸೊರೊಕದ ಸ್ಥಾಪಕರೂ ಹೌದು. ಇದು ಡೇಟಾವನ್ನು ಅರ್ಥಪೂರ್ಣ ಮಾಹಿತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಅವರು ಅಮೆರಿಕನ್ ಸಂಸ್ಕೃತ ವಿದ್ವಾಂಸ ಶೆಲ್ಡನ್ ಪೊಲಾಕ್ ನೇತೃತ್ವದ ಕ್ಲೇ ಸಂಸ್ಕೃತ ಗ್ರಂಥಾಲಯ ಯೋಜನೆಯ ಮುಂದುವರಿಕೆಯಾದ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾವನ್ನು ಸಹ ಸ್ಥಾಪಿಸಿದ್ದಾರೆ.