News Karnataka Kannada
Sunday, April 28 2024
ಬೆಂಗಳೂರು

ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಏರಿಕೆ?

Nandini milk price increase soon?
Photo Credit : News Kannada

ಬೆಂಗಳೂರು: ದರ ಏರಿಕೆ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಹೆಚ್ಚಿಸಲು ಹಾಲು ಒಕ್ಕೂಟಗಳು ಸರ್ಕಾರ ಮುಂದೆ ಪ್ರಸ್ತಾವ ಸಲ್ಲಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬದಿದೆ.
ಪಶುಸಂಗೋಪನೆ ಸಚಿವ ವೆಂಕಟೇಶ್‌ ಅವರು ಪ್ರತಿಕ್ರಿಯೆ ನೀಡಿ, ಹಾಲು ಒಕ್ಕೂಟಗಳು ತಮಗೆ ನಷ್ಟವಾಗುತ್ತಿರುವ ಕಾರಣ ದರ ಪರಿಷ್ಕರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿವೆ. ಆದರೆ ಸದ್ಯ ದರ ಏರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಹೇಳಿದರು.

ಇದೇ ವೇಳೆ ಅನ್ಯ ರಾಜ್ಯದ ಹಾಲಿನ ದರ ಹಾಗೂ ಕರ್ನಾಟಕದ ಹಾಲಿನ ದರಗಳ ನಡುವಿನ ವ್ಯತ್ಯಾಸದ ಅಂಕಿ ಅಂಶವನ್ನು ಸುದ್ದಿಗಾರರ ಮುಂದೆ ಪ್ರದರ್ಶಿಸಿದ ಅವರು, ಹಾಲಿನ ದರ ಏರಿಸುವಂತೆ ರೈತರ ಒತ್ತಡವೂ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ದರ ಏರಿಸುವ ಸುಳಿವು ನೀಡಿದರು.
ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ನಂದಿನಿ ಹಾಲನ್ನು ಲೀಟರ್ ಗೆ 42 ರೂ.ಗೆ ಮಾರಾಟ ಮಾಡುತ್ತಿದ್ದು, ಬೇರೆ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ನೆರೆಯ ರಾಜ್ಯಗಳಲ್ಲಿ ಲೀಟರ್ ಗೆ 48ರಿಂದ 51 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಲಿನ ದರವನ್ನು ಹೆಚ್ಚಿಸುವಂತೆ ಕೆಎಂಎಫ್ ಸದಸ್ಯರು, ರೈತರು ಮತ್ತು ಇತರ ಪಾಲುದಾರರಿಂದ ಒತ್ತಡವಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು