News Karnataka Kannada
Saturday, April 27 2024
ಬೆಂಗಳೂರು

ಇನ್ಮುಂದೆ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗಳಲ್ಲೂ ಸಿಗಲಿವೆ ನಂದಿ‌ನಿ ಹಾಲಿನ ಉತ್ಪನ್ನ

Nandini milk products to be available on international airlines
Photo Credit : News Kannada

ಬೆಂಗಳೂರು: ಕರ್ನಾಟಕದ ಕೆಎಂಎಫ್​ನ ನಂದಿನಿ ಉತ್ಪನ್ನಗಳು ಇನ್ಮುಂದೆ ಆಗಸದಲ್ಲೂ ಸಿಗಲಿವೆ. ಅಂತಾರಾಷ್ಟ್ರೀಯ ವಿಮಾನಗಳಲ್ಲೂ ನಂದಿನಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿವೆ. ಈಗಾಗಲೇ ಡೊಮೆಸ್ಟಿಕ್ ಏರ್ ಲೈನ್ಸ್ ಗಳಲ್ಲಿ ಕೆಎಂಎಫ್ ತನ್ನ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಈಗ ಅಂತಾರಾಷ್ಟ್ರೀಯ ಮಟ್ಟದ ಏರ್ ಸಿಂಗಪೂರ್ ಮತ್ತು ಏರ್ ಫ್ರಾನ್ಸ್, ನಂದಿನಿ ಬಟರ್ ಕಪ್​ಗಳನ್ನು ಸಪ್ಲೈ ಮಾಡಲು ಮನವಿ ಮಾಡಿವೆ.

ಸದ್ಯ ಈ ಏರ್ ಲೈನ್ಸ್ ಗಳಲ್ಲಿ ಅಮೂಲ್ ಬಟರ್ ಕಪ್ ಗಳ ಬಳಕೆಯಾಗುತ್ತಿತ್ತು. ಈಗ ನಂದಿನಿ ಪ್ರಾಡಕ್ಟ್ ಗಳಿಗಾಗಿ ವಿಮಾನ ಕಂಪನಿಗಳು ಮನವಿ ಮಾಡಿವೆ. ಇನ್ನೂ ಸರಬರಾಜಿಗೆ ಕೆಎಂಎಫ್ ಕೂಡ ಸಿದ್ದವಿದ್ದು, ಸದ್ಯದಲ್ಲೇ ಪ್ರಾಡಕ್ಟ್ ಗಳನ್ನು ಪೂರೈಕೆ ಮಾಡಲಿದೆ. ಅತ್ತ ವಂದೇ ಭಾರತ್ ರೈಲಿನಲ್ಲೂ ನಂದಿನಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಸಂಚಾರ ಮಾಡುವ ಎರಡು ರೈಲುಗಳಿಗೆ ನಂದಿನಿ ಕೋಲ್ಡ್ ಮಿಲ್ಕ್ ಮತ್ತು ಬಟರ್ ಪ್ಯಾಕೆಟ್ ಪೂರೈಕೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಸಹ ಹೆಚ್ಚಿನ ಉತ್ಪನ್ನಗಳಿಗೆ ಬೇಡಿಕೆ ಇಟ್ಟರೆ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು