News Karnataka Kannada
Monday, May 06 2024
ಬೆಂಗಳೂರು

ಗಿನ್ನಿಸ್ ವಿಶ್ವದಾಖಲೆ ಮಾನ್ಯತೆಯ ಪ್ರಮಾಣಪತ್ರ ಸ್ವೀಕರಿಸಿದ ಮಣಿಪಾಲ್ ಹಾಸ್ಪಿಟಲ್ಸ್

Manipal Hospitals received Guinness World Record Accreditation Certificate
Photo Credit : News Kannada

ಬೆಂಗಳೂರು: ದೇಶದ ಆರೋಗ್ಯ ಸೇವಾ ಪೂರೈಕೆ ಕ್ಷೇತ್ರದಲ್ಲಿ ಎರಡನೇ ಅತ್ಯಂತ ದೊಡ್ಡ ಸಂಸ್ಥೆಯಾಗಿರುವ ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್(ಎಂಎಚ್‍ಇ) ಈಗ ವಿಶ್ವ ಹೃದಯ ದಿನದ ಸಂದರ್ಭದಲ್ಲಿ 24 ಗಂಟೆಗಳ ಒಳಗೆ ಕಾರ್ಡಿಯೋಪಲ್ಮನರಿ ರಿಸಸಿಟೇಷನ್(ಸಿಪಿಆರ್) ಅಂದರೆ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯವನ್ನು ಪುನರ್ ಸ್ಥಾಪಿಸುವ ಕ್ರಮವನ್ನು ಕಲಿತುಕೊಳ್ಳಲು ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಜ್ಞೆಗಳನ್ನು ಸ್ವೀಕರಿಸಿದ್ದಕ್ಕಾಗಿ ಗಿನ್ನಿಸ್ ವಲ್ರ್ಡ್ ರೆಕಾಡ್ರ್ಸ್‍ನಿಂದ ಮಾನ್ಯತಾ ಪ್ರಮಾಣಪತ್ರವನ್ನು ಸ್ವೀಕರಿಸಿದೆ. ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಯ ಪ್ರತಿನಿಧಿಯೊಬ್ಬರು ಈ ಪ್ರಮಾಣಪತ್ರವನ್ನು ಮಣಿಪಾಲ್ ಹಾಸ್ಪಿಟಲ್ಸ್‍ನ ಚೇರ್ಮನ್ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರಿಗೆ ಹಸ್ತಾಂತರಿಸಿದರು. ನಗರದಲ್ಲಿ ನಡೆದ ಈ ಕಾರ್ಯಕ್ರಮದ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಕಪಿಲ್ ದೇವ್ ಅವರು ಹಾಜರಿದ್ದರು.

ಮಣಿಪಾಲ್ ಹಾಸ್ಪಿಟಲ್ಸ್ ಸಂಸ್ಥೆ ತಮ್ಮ `ಗಾರ್ಡಿಯನ್ಸ್ ಆಫ್ ದಿ ಹಾರ್ಟ್’ ಉಪಕ್ರಮದ ಮೂಲಕ ಸಾಮಾನ್ಯ ಜನರು ಸಿಪಿಆರ್ ಕ್ರಮವನ್ನು ಕಲಿತುಕೊಂಡು ಜೀವ ಉಳಿಸುವ ಪ್ರತಿಜ್ಞೆ ಕೈಗೊಳ್ಳಲು ಅವರಿಗೆ ಪ್ರೇರೇಪಣೆ ನೀಡುವುದು, ಶಿಕ್ಷಣ ನೀಡುವುದು ಮತ್ತು ಸ್ಫೂರ್ತಿ ನೀಡುವ ಗುರಿ ಹೊಂದಿದೆ. 2023ರ ಸೆಪ್ಟೆಂಬರ್ 27 ಮತ್ತು 28ರಂದು ಈ ಚಟುವಟಿಕೆಯ ಭಾಗವಾಗಿ 22,000ಕ್ಕೂ ಹೆಚ್ಚಿನ ಸಂಖ್ಯೆಯ ಆನ್‍ಲೈನ್ ನೋಂದಣಿಗಳನ್ನು ಸ್ವೀಕರಿಸಲಾಗಿದೆ. ಲಭ್ಯವಿರುವ ವಿವರಗಳ ಪ್ರಕಾರ ಶೇ.2ರಷ್ಟು ಭಾರತೀಯರು ಮಾತ್ರ ಸಿಪಿಆರ್ ಕುರಿತು ಜಾಗೃತಿ ಹೊಂದಿರುತ್ತಾರೆ. ವ್ಯಕ್ತಿಯೊಬ್ಬರ ಉಸಿರಾಟ ಅಥವಾ ಹೃದಯದ ಮಿಡಿತ ನಿಂತಾಗ ನಡೆಸಲಾಗುವ ಜೀವ ಉಳಿಸುವಂತಹ ತುರ್ತು ಕ್ರಮ ಇದಾಗಿರುತ್ತದೆ. ವಿದ್ಯುತ್ ಆಘಾತ, ಹೃದಯಾಘಾತ ಅಥವಾ ನೀರಿನಲ್ಲಿ ಮುಳುಗಿದ ವೈದ್ಯಕೀಯ ತುರ್ತು ಸ್ಥಿತಿಗಳ ಸಂದರ್ಭಗಳಲ್ಲಿ ಇದು ಸಂಭವಿಸಬಹುದು.

ಖ್ಯಾತ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಕಪಿಲ್ ದೇವ್ ಅವರು ಮಾತನಾಡಿ, “ಅತ್ಯಂತ ಹೆಚ್ಚಿನ ಸಂಖ್ಯೆಯ ಸಿಪಿಆರ್ ತರಬೇತಿ ಪಡೆಯುವಂತಹ ಪ್ರತಿಜ್ಞೆಗಳಿಗಾಗಿ ಗಿನ್ನಿಸ್ ವಿಶ್ವದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದ ಅವರ ಗಮನಾರ್ಹ ಸಾಧನೆಗೆ ಮಣಿಪಾಲ್ ಹಾಸ್ಪಿಟಲ್ಸ್‍ಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೃದಯ ಸ್ತಂಭನ ಮತ್ತು ಹೃದಯ ವೈಫಲ್ಯಗಳ ಪ್ರಕರಣಗಳು ಹೆಚ್ಚುತ್ತಿದ್ದು, ಇವು ಸಿಪಿಆರ್ ತರಬೇತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತವೆ. ಅದರಲ್ಲಿಯೂ ಹಿರಿಯ ವಯಸ್ಕರಿಗೆ ಈ ತರಬೇತಿಯ ಪ್ರಾಮುಖ್ಯತೆ ಇನ್ನು ಹೆಚ್ಚಿನದಾಗಿರುತ್ತದೆ’’ ಎಂದರು.

“ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡುವುದು ಮತ್ತು ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಈ ತೊಂದರೆಯನ್ನು ಗುಣಪಡಿಸುವುದಕ್ಕಿಂತಲೂ ಇದನ್ನು ತಡೆಯುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೃದಯ ಸಂಬಂಧಿತ ಅಸ್ವಸ್ಥತೆಗಳ ಅಪಾಯಗಳನ್ನು ಕಡಿಮೆ ಮಾಡಲು ಆರೋಗ್ಯಯುತ ಜೀವನಮಾರ್ಗಕ್ಕೆ ಆದ್ಯತೆ ನೀಡಲು ಪ್ರತಿಯೊಬ್ಬರನ್ನು ನಾನು ಪ್ರೋತ್ಸಾಹಿಸುತ್ತೇನೆ’’ ಎಂದರು.

ಮಣಿಪಾಲ್ ಹಾಸ್ಪಿಟಲ್ಸ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕಾರ್ತಿಕ್ ರಾಜಗೋಪಾಲ್ ಅವರು ಮಾತನಾಡಿ, “ಮಣಿಪಾಲ್ ಹಾಸ್ಪಿಟಲ್ಸ್‍ಗೆ ಪ್ರತಿಷ್ಟಿತ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ಪತ್ರ ನೀಡಿ ಗೌರವಿಸಿರುವುದು ನಮಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಪ್ರಮುಖವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಕುರಿತು ಜಾಗೃತಿ

ಹೆಚ್ಚಿಸುವಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಸತತವಾಗಿ ನೇತೃ ತ್ವವಹಿಸಿದೆ. ಜೀವ ಉಳಿಸುವಂತಹ ಅಗತ್ಯ ಕೌಶಲ್ಯಗಳನ್ನು ಕಲಿತುಕೊಳ್ಳುವುದರ ಪ್ರಾಮುಖ್ಯತೆ ಕುರಿತು ಶಿಕ್ಷಣ ನೀಡಲು ಜನರಿಗೆ ಸಿಪಿಆರ್ ತರಬೇತಿ ನೀಡುವ ವಿಷಯದಲ್ಲಿ ನಾವು ಅಚಲ ಬದ್ಧತೆ ಹೊಂದಿದ್ದೇವೆ. ಸಮರ್ಪಿತ ಹೃದಯ ರೋಗಶಾಸ್ತ್ರ ಪರಿಣತರ ತಂಡ ಹಾಗೂ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳೊಂದಿಗೆ, ವಿಸ್ತಾರವಾದ ಶ್ರೇಣಿಯ ಆರೋಗ್ಯ ಸೇವಾ ತುರ್ತು ಸ್ಥಿತಿಗಳನ್ನು ನಿಭಾಯಿಸಲು ನಾವು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ. ಎಲ್ಲರಿಗೂ ವಿಶ್ವಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವತ್ತ ನಾವು ದಣಿವರಿಯದ ಪ್ರಯತ್ನ ನಡೆಸುತ್ತಿದ್ದೇವೆ’’ ಎಂದರು.

ಗಿನ್ನಿಸ್ ವಲ್ರ್ಡ್ ರೆಕಾಡ್ರ್ಸ್‍ನ ಪ್ರತಿನಿಧಿ ಅವರು ಮಾತನಾಡಿ, “ಸಿಪಿಆರ್ ಕುರಿತು ಜಾಗೃತಿಯನ್ನು ಪ್ರೋತ್ಸಾಹಿಸುವಲ್ಲಿ ಅಸಾಧಾರಣ ಸಾಧನೆಗಾಗಿ ಮಣಿಪಾಲ್ ಹಾಸ್ಪಿಟಲ್ಸ್ ಅನ್ನು ಗುರುತಿಸಿ ಗೌರವಿಸುವುದಕ್ಕೆ ಗಿನ್ನಿಸ್ ವಿಶ್ವದಾಖಲೆ ಸಂಸ್ಥೆ ಹರ್ಷಗೊಂಡಿದೆ. 24 ಗಂಟೆಗಳಲ್ಲಿ ಸಿಪಿಆರ್ ತರಬೇತಿ ಪಡೆಯಲು ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಜ್ಞೆಗಳನ್ನು ಪಡೆಯುವ ಸಾಧನೆ ಮಾಡುವುದು ಕೇವಲ ಗಮನಾರ್ಹ ಸಾಧನೆ ಮಾತ್ರವಲ್ಲದೆ ಸಮುದಾಯಗಳ ಯೋಗಕ್ಷೇಮಕ್ಕಾಗಿ ಶ್ಲಾಘನೀಯ ಕೊಡುಗೆಯೂ ಆಗಿರುತ್ತದೆ. ಅಸಾಧಾರಣವಾದುದ್ದನ್ನು ಸಂಭ್ರಮಿಸುವ ನಮ್ಮ ಉದ್ದೇಶಕ್ಕೆ ತಕ್ಕಂತೆ ಮಣಿಪಾಲ್ ಹಾಸ್ಪಿಟಲ್ಸ್ ಸಿಪಿಆರ್ ತರಬೇತಿಯನ್ನು ಪ್ರೋತ್ಸಾಹಿಸುತ್ತಿದೆ. ನೂತನ ದಾಖಲೆ ಸ್ಥಾಪಿಸಿದ್ದಕ್ಕಾಗಿ ಮತ್ತು ಜೀವಗಳನ್ನು ಉಳಿಸುವುದರಲ್ಲಿ ಅವರ ಬದ್ಧತೆಗಾಗಿ ಅವರನ್ನು ನಾವು ಅಭಿನಂದಿಸುತ್ತೇವೆ’’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು