News Karnataka Kannada
Monday, April 29 2024
ಬೆಂಗಳೂರು

ಲಗೇಜ್‌ಗಳನ್ನು ಸಾಗಿಸಲು ಸದ್ಯದಲ್ಲೇ ರಸ್ತೆಗಿಳಿಯಲಿದೆ ಕೆಎಸ್ಆರ್ಟಿಸಿ ಲಾರಿ

ksrtc lorry
Photo Credit : News Kannada

ಬೆಂಗಳೂರು: ಪ್ರಸ್ತುತ ಕೆಎಸ್ಆರ್ಟಿಸಿ ತನ್ನ ಸರಕು ಸಾಗಾಣಿಕೆಗಳನ್ನು ಬಸ್‌ಗಳಲ್ಲೇ ಪಾರ್ಸೆಲ್ ಮೂಲಕ ಸಾಗಣೆ ಮಾಡುತ್ತದೆ. ಆದರೆ ಭವಿಷ್ಯದಲ್ಲಿ ಸರಗು ಸಾಗಾಣಿಕೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ. ಕೆಎಸ್‌ಆರ್‌ಟಿಸಿ ಶೀಘ್ರದಲ್ಲೇ ಲಾರಿಗಳ ಸೇವೆ ಒದಗಿಸಲಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ.

ಸರಕು ಸಾಗಾಣಿಕೆಗಾಗಿಯೇ ಪ್ರತ್ಯೇಕ ವಾಹನಗಳ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಸರಕು ಸಾಗಾಣಿಕೆ ಸೇವೆಯನ್ನು ನೀಡಲು ಲಾರಿಗಳನ್ನು ಒದಗಿಸಲು ಕೆಎಸ್ಆರ್ಟಿಸಿ ಮುಂದಾಗುತ್ತಿದೆ.

ಕೆಎಸ್‌ಆರ್‌ಟಿಸಿ ಲಾರಿಗೆ ಬಸ್ ಚಾಲಕರನ್ನೇ ಲಾರಿ ಚಾಲಕರನ್ನಾಗಿ ಮಾಡುವ ಸಾಧ್ಯತೆಯಿದೆ. ಇದಕ್ಕೆಂದು ಪ್ರತ್ಯೇಕ ನೇಮಕಾತಿ ಮಾಡುವ ಸಾಧ್ಯತೆ ಕಡಿಮೆಯಿದೆ. ಪಾರ್ಸೆಲ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೂ ತಲುಪಿಸಲು ಚಿಂತನೆ ನಡೆದಿದ್ದು, ಪ್ರತ್ಯೇಕ ಶುಲ್ಕ ವಿಧಿಸಿ, ಸೇವೆಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿ ಪ್ಲಾನ್ ಮಾಡಿದೆ.

ನಿಗಮದ ನಿಲ್ದಾಣಗಳಿಗೆ ಬಂದು ಬೀಳುವ ಪಾರ್ಸೆಲ್‌ಗಳನ್ನು ಸ್ಥಳೀಯ ಸಿಬ್ಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲು ಪ್ಲಾನ್ ಇದೆ. ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸುವ ಸಾಧ್ಯೆಯೂ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು