ಕೋಲಾರ: ರಾತ್ರಿ ಮಲಗಿದ್ದವರ ಮೇಲೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಡೆದಿದೆ.ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6), ವೈಶಾಲಿ (7) ಗಾಯಾಳುಗಳು. ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶ್ರೀನಿವಾಸ ಮತ್ತು ಕುಟುಂಬ. ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಎಂದಿನಂತೆ ಊಟ ಮಾಡಿ ಮಲಗಿದ್ದ ವೇಳೆ ತಡರಾತ್ರಿ ಮೇಲ್ಛಾವಣಿ ಕುಸಿದು ಮಲಗಿದವರ ಮೇಲೆ ಬಿದ್ದಿದೆ.
ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.