News Karnataka Kannada
Wednesday, May 08 2024
ಬೆಂಗಳೂರು

ಮೊಬೈಲ್ ತಯಾರಿಕೆಯಲ್ಲಿ ಭಾರತಕ್ಕೆ 2ನೇ ಸ್ಥಾನ: ವರದಿ

mobile manufacturing
Photo Credit : News Kannada

ಬೆಂಗಳೂರು: ಮೊಬೈಲ್ ತಯಾರಿಕೆಯಲ್ಲಿ ಭಾರತಕ್ಕೆ 2ನೇ ಸ್ಥಾನ ದೊರಕಿದೆ. 2014 ರಿಂದ 2022ರ ನಡುವೆ ಮೊಬೈಲ್ ತಯಾರಿಕೆಯಲ್ಲಿ ಶೇ. 23ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆಗೆ ದರವನ್ನು ದಾಖಲಿಸಿರುವ ಭಾರತವು ಈಗ ವಿಶ್ವದಲ್ಲಿ 2ನೇ ಅತಿ ಹೆಚ್ಚು ಸಂಖೆಯಲ್ಲಿ ಮೊಬೈಲ್ ಫೋನ್ ಗಳನ್ನು ತಯಾರಿಸುತ್ತಿರುವ ದೇಶವಾಗಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಸಂಸ್ಥೆ ಹೇಳಿದೆ.

2014ರಲ್ಲಿ ದೇಶಿ ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್‌ ಫೋನ್‌ಗಳ ಪಾಲು ಶೇ 19ರಷ್ಟು ಇತ್ತು. ಇದು ಈಗ ಶೇ 98ಕ್ಕೆ ತಲುಪಿದೆ ಎಂದು ಕೌಂಟರ್‌ಪಾಯಿಂಟ್‌ ವರದಿ ಹೇಳಿದೆ. ಜಗತ್ತಿನಲ್ಲಿ ಮೊಬೈಲ್‌ ಫೋನ್ ತಯಾರಿಕೆಯಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸರ್ಕಾರ ಕೂಡ ಈಚೆಗೆ ಹೇಳಿತ್ತು. ಈ ವರದಿಯು ಆ ಮಾತಿಗೆ ಇಂಬು ಕೊಡುವಂತೆ ಇದೆ. ಭಾರತದಲ್ಲಿ ಮೊಬೈಲ್‌ಗೆ ಬೇಡಿಕೆ ಹೆಚ್ಚುತ್ತಿರುವುದು, ಡಿಜಿಟಲ್ ಸಾಕ್ಷರತೆ ಹೆಚ್ಚಾಗುತ್ತಿರುವುದು ಮತ್ತು ಸ್ಥಳೀಯವಾಗಿ ತಯಾರಿಕೆ ಹೆಚ್ಚಿಸಲು ಸರ್ಕಾರ ನೀಡುತ್ತಿರುವ ಉತ್ತೇಜನ ಕ್ರಮಗಳು ಭಾರತವು ಎರಡನೆಯ ಸ್ಥಾನಕ್ಕೆ ಬರಲು ಕಾರಣ ಎಂದು ವರದಿ ಹೇಳಿದೆ.

‘ಮೊಬೈಲ್‌ ಫೋನ್ ಹಾಗೂ ಅದರ ಬಿಡಿಭಾಗಗಳ ತಯಾರಿಕೆಗೆ ಹಲವು ಕಂಪನಿಗಳು ದೇಶದಲ್ಲಿ ಘಟಕ ಆರಂಭಿಸುತ್ತಿವೆ. ಇದರಿಂದಾಗಿ ಹೂಡಿಕೆ ಹೆಚ್ಚುತ್ತಿದೆ, ಉದ್ಯೋಗಸೃಷ್ಟಿ ಆಗುತ್ತಿದೆ’ ಎಂದು ಕೌಂಟರ್‌ಪಾಯಿಂಟ್‌ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ.

ಭಾರತವು ಎಲ್ಲಾ ಜಾಗತಿಕ ತಯಾರಕರ ವಿಶ್ವಾಸಾರ್ಹ ದೇಶದ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ದೊಡ್ಡ ದೊಡ್ಡ ಐತಿ ಹಾರ್ಡ್‍ವೇರ್ ಕಂಪನಿಗಳು ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗುತ್ತಿವೆ. ಐಟಿ ಸೇವಾ ಉದ್ಯಮವು ಉತ್ತಮ ಬೇಡಿಕೆಯಿಂದ ಮತ್ತಷ್ಟು ಬೆಂಬಲಿತ ಕ್ಷೇತ್ರವಾಗುತ್ತಿದೆ.

ಮುಖ್ಯವಾಗಿ ಮೊಬೈಲ್ ಫೋನ್ ಗಳ ತಯಾರಿಜೆಯಲ್ಲಿ ಭಾರತವು ವಿಶ್ವದ 2ನೇ ಅತಿ ದೊದ್ದ ಉತ್ಪಾದಕ ದೇಶವಾಗಿದೆ. ಈ ವರ್ಷ 11 ಶತಕೋಟಿ ಯು ಎಸ್ ಡಿ ಮೊಬೈಲ್ ಫೋನ್ಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು