News Karnataka Kannada
Wednesday, May 15 2024
ಬೆಂಗಳೂರು

ಸರಾಗವಾಗಿ‌ ವೀಸಾ ವಿಸ್ತರಣೆ ನಿಲ್ಲಿಸಲು ಹೈಕೋರ್ಟ್ ಆದೇಶ

Visa
Photo Credit : News Kannada

ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಸರಾಗವಾಗಿ ವೀಸಾ ವಿಸ್ತರಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಈ ರೀತಿ ದಾಖಲೆಗಳನ್ನು ಪರಿಶೀಲಿಸದೆ ವೀಸಾಗಳನ್ನು ವಿಸ್ತರಿಸುವ ಕುರಿತು ಆಘಾತವನ್ನು ವ್ಯಕ್ತಪಡಿಸಿದೆ.

ಇನ್ನು ಮುಂದೆ ವೈದ್ಯಕೀಯ ಅಥವಾ ವೈದ್ಯಕೀಯ ಅಟೆಂಡೆಂಟ್ ವೀಸಾ ಕೋರಿ ಸಲ್ಲಿಕೆಯಾಗುವ ಸಂವಹನಗಳನ್ನು ಆಸ್ಪತ್ರೆಗಳು ಹೇಗೆ ನೀಡುತ್ತಿವೆ ಎಂಬುದನ್ನು ಪರಿಶೀಲಿಸುವ ಮೂಲಕ ನೈಜ ಪ್ರಕರಣಗಳಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ನಿರ್ದೇಶಿಸಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ವೀಸಾ ವಿಸ್ತರಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಎಫ್ ಆರ್ ಆರ್ ಒ ಕ್ರಮ ಪ್ರಶ್ನಿಸಿ ಬೆಂಗಳೂರು ನಗರದಲ್ಲಿ ನೆಲೆಸಿರುವ ಯೆಮೆನ್ ಪ್ರಜೆ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೆರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಯಾವುದೇ ಮಾನ್ಯ ದಾಖಲೆಗಳಿಲ್ಲದೆ ವೈದ್ಯಕೀಯ ಅಟೆಂಡೆಂಟ್ ವೀಸಾವನ್ನು ವೈದ್ಯಕೀಯ ವೀಸಾಕ್ಕೆ ಪರಿವರ್ತಿಸಿದ ಎಫ್‌ಆರ್‌ಆರ್‌ಒ ಕಚೇರಿಯ ನಡವಳಿಗೆ ಕಿಡಿಕಾರಿ, ಇದೊಂದು ಗಂಭೀರ ನೂನ್ಯತೆ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು