ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೊಂದು ಗುಡ್ ನ್ಯೂಸ್ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವು ಡಿಸೆಂಬರ್ 3ರಂದು (ನಾಳೆ) ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 11:45 ಗಂಟೆವರೆಗೂ ಮೆಟ್ರೋ ಸೇವೆ ಕಲ್ಪಿಸಲಾಗಿದೆ. ನೇರಳೆ ಹಾಗೂ ಹಸಿರು ಮಾರ್ಗಗಳ 4 ಟರ್ಮಿನಲ್ ಮೆಟ್ರೋ ನಿಲ್ದಾಣದಿಂದ ಹೊರಡುವ ರೈಲು ರಾತ್ರಿ 11.45ರ ವರೆಗೆ ಇರಲಿದೆ. ರಿಟರ್ನ್ ಜರ್ನಿ ಟಿಕೆಟ್ಗಳು ಭಾನುವಾರ ಮಧ್ಯಾಹ್ನ 2 ಗಂಟೆಯಿಂದಲೇ ಲಭ್ಯ ಇರಲಿದೆ.