ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಏರ ತೊಡಗಿದ್ದು, ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಶೇ. 5ಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆ ತೀರಾ ಹೆಚ್ಚಾಗುವ ನಿರೀಕ್ಷೆ ಇದೆ. 22 ಗ್ರಾಮ್ ಚಿನ್ನದ ಬೆಲೆ 60 ಸಾವಿರ ರೂ ಆಸುಪಾಸಿಗೆ ಹೋಗುವ ಸಾಧ್ಯತೆ ಇದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,750 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,000 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರೂಪಾಯಿಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 57,750 ರೂ, ಚೆನ್ನೈ: 58,250 ರೂ, ಮುಂಬೈ: 57,750 ರೂ, ದೆಹಲಿ: 57,900 ರೂ, ಕೋಲ್ಕತಾ: 57,750 ರೂ, ಕೇರಳ: 57,750 ರೂ, ಅಹ್ಮದಾಬಾದ್: 57,800 ರೂ, ಜೈಪುರ್: 57,900 ರೂ, ಲಕ್ನೋ: 57,900 ರೂ, ಭುವನೇಶ್ವರ್: 57,750 ರೂ ಆಗಿದೆ.
ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.