News Karnataka Kannada
Wednesday, May 01 2024
ಬೆಂಗಳೂರು

ಭಾರತದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ: ಇವತ್ತಿನ ದರಪಟ್ಟಿ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಬೆಲೆ ಬಹಳ ದಿನಗಳ ಬಳಿಕ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ತಗ್ಗಿದೆ. 
Photo Credit : Pixabay

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ  ಇಂದು ಇಳಿಕೆ ಕಂಡಿದ್ದು, ನಿನ್ನೆ ಬೆಳ್ಳಿ ಬೆಲೆ ಇಳಿದು ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿತ್ತು. ಇವತ್ತು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ.

ಚಿನ್ನದಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ವಿದೇಶಗಳ ಮಾರುಕಟ್ಟೆಗಳಲ್ಲಿಯೂ ಚಿನ್ನದ ಬೆಲೆ ತುಸು ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,840 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,550 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,275 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 57,600 ರೂ, ಚೆನ್ನೈ: 58,100 ರೂ
ಮುಂಬೈ: 57,600 ರೂ, ದೆಹಲಿ: 57,750 ರೂ, ಕೋಲ್ಕತಾ: 57,600 ರೂ, ಕೇರಳ: 57,600 ರೂ, ಅಹ್ಮದಾಬಾದ್: 57,650 ರೂ, ಜೈಪುರ್: 57,750 ರೂ, ಲಕ್ನೋ: 57,750 ರೂ, ಭುವನೇಶ್ವರ್: 57,600 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,080 ರಿಂಗಿಟ್ (53,669 ರೂಪಾಯಿ ), ದುಬೈ: 2,270 ಡಿರಾಮ್ (51,292 ರೂಪಾಯಿ), ಅಮೆರಿಕ: 620 ಡಾಲರ್ (51,459 ರೂಪಾಯಿ), ಸಿಂಗಾಪುರ: 845 ಸಿಂಗಾಪುರ್ ಡಾಲರ್ (52,148 ರೂಪಾಯಿ ), ಕತಾರ್: 2,330 ಕತಾರಿ ರಿಯಾಲ್ (53,017 ರೂಪಾಯಿ), ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,788 ರೂಪಾಯಿ), ಓಮನ್: 246 ಒಮಾನಿ ರಿಯಾಲ್ (53,030 ರೂಪಾಯಿ), ಕುವೇತ್: 194.50 ಕುವೇತಿ ದಿನಾರ್ (52,428 ರೂಪಾಯಿ) ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು