ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ತುಸು ತಗ್ಗಿದೆ. ಯುಎಇಯಲ್ಲಿ ಮಾತ್ರ ಚಿನ್ನದ ಬೆಲೆ ತುಸು ಏರಿಕೆ ಕಂಡಿದೆ. ಉಳಿದೆಡೆ ಅಲ್ಪಸ್ವಲ್ಪ ಇಳಿಕೆ ಆಗಿದೆ. ಆದರೆ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ.
ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮಾತ್ರ ಬೆಳ್ಳಿ ಇಂದು ತುಸು ಕಡಿಮೆ ಆಗಿದೆ.
ಸದ್ಯ ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,900 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,070 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರೂಪಾಯಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 56,900 ರೂ, ಚೆನ್ನೈ: 57,400 ರೂ
ಮುಂಬೈ: 56,900 ರೂ, ದೆಹಲಿ: 57,050 ರೂ, ಕೋಲ್ಕತಾ: 56,900 ರೂ, ಕೇರಳ: 56,900 ರೂ, ಅಹ್ಮದಾಬಾದ್: 56,950 ರೂ, ಜೈಪುರ್: 57,050 ರೂ, ಲಕ್ನೋ: 57,050 ರೂ, ಭುವನೇಶ್ವರ್: 56,900 ರೂ ಇದೆ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಮಲೇಷ್ಯಾ: 3,050 ರಿಂಗಿಟ್ (52,961 ರೂಪಾಯಿ), ದುಬೈ: 2,237.50 ಡಿರಾಮ್ (50,588 ರೂಪಾಯಿ), ಅಮೆರಿಕ: 610 ಡಾಲರ್ (50,658 ರೂಪಾಯಿ), ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,532 ರೂಪಾಯಿ), ಕತಾರ್: 2,300 ಕತಾರಿ ರಿಯಾಲ್ (52,377 ರೂಪಾಯಿ), ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,930 ರೂಪಾಯಿ), ಓಮನ್: 243 ಒಮಾನಿ ರಿಯಾಲ್ (52,416 ರೂಪಾಯಿ), ಕುವೇತ್: 192.50 ಕುವೇತಿ ದಿನಾರ್ (51,882 ರೂಪಾಯಿ) ಇದೆ.