News Karnataka Kannada
Thursday, May 02 2024
ಬೆಂಗಳೂರು

ಚಿನ್ನ ಗ್ರಾಮ್​ಗೆ ಬರೋಬ್ಬರಿ 85 ರೂನಷ್ಟು ಹೆಚ್ಚಳ: ಇವತ್ತಿನ ದರಪಟ್ಟಿ ಹೀಗಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮಂಗಳವಾರ ಏರಿಕೆ ಕಂಡಿವೆ.  ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 85 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆ 60 ಪೈಸೆ ಹೆಚ್ಚಾಗಿದೆ.
Photo Credit : NewsKarnataka

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮಂಗಳವಾರ ಏರಿಕೆ ಕಂಡಿವೆ.  ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 85 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆ 60 ಪೈಸೆ ಹೆಚ್ಚಾಗಿದೆ.

ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 250 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,380 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,860 ರೂಪಾಯಿ ಇದೆ.

ಚಿನ್ನ ಬಳಕೆಯ ದೇಶಗಳಾದ ಚೀನಾ ಮತ್ತು ಟರ್ಕಿಯ ರೀಟೇಲ್ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಲೆ ವಿಪರೀತವಾಗಿ ಹೆಚ್ಚಾಗುತ್ತಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 63,600 ರೂ, ಚೆನ್ನೈ: 64,550 ರೂ
ಮುಂಬೈ: 63,600 ರೂ, ದೆಹಲಿ: 63,750 ರೂ, ಕೋಲ್ಕತಾ: 63,600 ರೂ, ಕೇರಳ: 63,600 ರೂ, ಅಹ್ಮದಾಬಾದ್: 63,650 ರೂ, ಜೈಪುರ್: 63,750 ರೂ, ಲಕ್ನೋ: 63,750 ರೂ, ಭುವನೇಶ್ವರ್: 63,600 ರೂ ಆಗಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) : ಮಲೇಷ್ಯಾ: 3,370 ರಿಂಗಿಟ್ (59,408 ರೂಪಾಯಿ ), ದುಬೈ: 2,535 ಡಿರಾಮ್ (57,558 ರೂಪಾಯಿ ),ಅಮೆರಿಕ: 685 ಡಾಲರ್ (57,116 ರೂಪಾಯಿ ), ಸಿಂಗಾಪುರ: 946 ಸಿಂಗಾಪುರ್ ಡಾಲರ್ (58,465 ರೂಪಾಯಿ ), ಕತಾರ್: 2,585 ಕತಾರಿ ರಿಯಾಲ್ (59,114 ರೂ), ಸೌದಿ ಅರೇಬಿಯಾ: 2,600 ಸೌದಿ ರಿಯಾಲ್ (57,799 ರೂಪಾಯಿ ), ಓಮನ್: 274 ಒಮಾನಿ ರಿಯಾಲ್ (59,344 ರೂಪಾಯಿ ), ಕುವೇತ್: 214.50 ಕುವೇತಿ ದಿನಾರ್ (58,131 ರೂಪಾಯಿ )ಆಗಿದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ.  ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು