ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ ನಿರಂತರ ಏರಿಕೆ ಮುಂದುವರಿದಿದೆ. ಭಾರತ ಹಾಗು ವಿದೇಶಗಳಲ್ಲಿ ಈ ಎರಡೂ ಲೋಹಗಳ ಬೆಲೆ ಸತತವಾಗಿ ಏರಿದೆ. ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ 8 ಬಾರಿ ಏರಿದೆ. 100 ಗ್ರಾಮ್ನ ಬೆಳ್ಳಿ ಬೆಲೆ 10 ದಿನದಲ್ಲಿ 500 ರೂನಷ್ಟು ಏರಿಕೆಯಾಗಿದೆ. 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ ಕಳೆದ 8ದಿನದಲ್ಲಿ 1,150 ರೂಗಳಷ್ಟು ಏರಿಕೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,600ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,650ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,840ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,600ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,785ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 55,600 ರೂ., ಚೆನ್ನೈ: 55,900 ರೂ., ಮುಂಬೈ: 55,600 ರೂ., ದೆಹಲಿ: 55,750 ರೂ., ಕೋಲ್ಕತಾ: 55,600 ರೂ., ಕೇರಳ: 55,600 ರೂ., ಅಹ್ಮದಾಬಾದ್: 55,650 ರೂ., ಜೈಪುರ್: 55,750 ರೂ., ಲಕ್ನೋ: 55,750 ರೂ., ಭುವನೇಶ್ವರ್: 55,600ರೂ.ಯಿದೆ.
ಇನ್ನು ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಬೆಂಗಳೂರು: 7,785 ರೂ., ಚೆನ್ನೈ: 8,200 ರೂ., ಮುಂಬೈ: 7,840 ರೂ., ದೆಹಲಿ: 7,840 ರೂ., ಕೋಲ್ಕತಾ: 7,840 ರೂ., ಕೇರಳ: 8,200 ರೂ., ಅಹ್ಮದಾಬಾದ್: 7,840 ರೂ., ಜೈಪುರ್: 7,840 ರೂ., ಲಕ್ನೋ: 7,840 ರೂ., ಭುವನೇಶ್ವರ್: 8,200 ರೂ.ಯಿದೆ.