News Karnataka Kannada
Sunday, May 05 2024
ದಾವಣಗೆರೆ

ಮನೆ ಬಾಗಿಲಿಗೆ ಬರಲಿದೆ ‘ಪಿಂಚಣಿ ಮಂಜೂರು’ ಆದೇಶ

Ashok Revenue 28 6 21
Photo Credit :

ದಾವಣಗೆರೆ : ಇದುವರೆಗೆ ಪಿಂಚಣಿಗಾಗಿ ಹಿರಿಯ ನಾಗರೀಕರು  ಅಲೆಯಬೇಕಾಗಿತ್ತು. ಆದ್ರೇ ಇನ್ಮುಂದೆ ಅರ್ಜಿಗಳನ್ನು ಹಿಡಿದು ಪಿಂಚಣಿಗಾಗಿ ( Pension ) ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ. ಯಾಕೆಂದ್ರೇ. ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ಬರಲಿದೆ.

ಹೌದು.. ಈ ಕುರಿತಂತೆ ಕಂದಾಯ ಸಚಿವ ಆರ್.ಅಶೋಕ್  ಅಭಯ ನೀಡಿದ್ದು, ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸೋ ಸಲುವಾಗಿಯೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಸ್ಥಳೀಯರ ಸಮಸ್ಯೆ ಸ್ಥಳದಲ್ಲೇ ಆಲಿಸಿ, ಪರಿಹಾರ ಸೂಚಿಸುವಂತ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಮಾಡೋ ಮೂಲಕ, ಶಾಲೆ, ಗ್ರಾಮೀಣ ಭಾಗದ ಜನರ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುತ್ತದೆ. ಈಗಾಗಲೇ ಪಡಿತರದೊಂದಿಗೆ ಆಧಾರ್ ಸಂಖ್ಯೆ ಜೋಡಿಸಲಾಗಿದ್ದು, ಇದರಿಂದಾಗಿ 60 ವರ್ಷ ಮೇಲ್ಪಟ್ಟವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಲಿದ್ದು, ಅಧಿಕಾರಿಗಳೇ ಪಿಂಚಣಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ, ಪಿಂಚಣಿ ಮಂಜೂರು ಆದೇಶ ನೀಡಲಿದ್ದಾರೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು