News Karnataka Kannada
Sunday, May 19 2024
ಬೆಂಗಳೂರು

ವರ್ಕ್ ಫ್ರಮ್ ಹೋಮ್​ ಸೋಗಿನಲ್ಲಿ 158 ಕೋಟಿ ರೂ. ವಂಚನೆ : ಆರೋಪಿಗಳು ಆರೆಸ್ಟ್

Photo Credit : News Kannada

ಬೆಂಗಳೂರು: ವರ್ಕ್​ ಫ್ರಾಮ್​​ ಹೋಮ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದೆಂಬ ಆಮಿಷ ಒಡ್ಡಿ ಜನರ ಖಾತೆಗಳಿಂದ 158 ಕೋಟಿ ರೂ. ದೋಚಿದ್ದ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಸೇರಿದಂತೆ 28 ರಾಜ್ಯಗಳಲ್ಲಿ 2,143 ಸೈಬರ್​ ವಂಚನೆ ಕೃತ್ಯ ಎಸಗಿದ್ದಾರೆ. ಆರೋಪಿಗಳ ಬರೊಬ್ಬರಿ 30 ಬ್ಯಾಂಕ್ ಖಾತೆಗಳು ಪರಿಶೀಲನೆ ನಡೆಸಿದಾಗ 158 ಕೋಟಿ ರೂ. ಮೊತ್ತದ ವಹಿವಾಟು ನಡೆದಿದೆ. ಆರೋಪಿಗಳಿಂದ 11 ಮೊಬೈಲ್ ಫೋನ್‌ಗಳು ಮತ್ತು 15 ಸಿಮ್ ಕಾರ್ಡ್‌ ಸೇರಿದಂತೆ 62.8 ಲಕ್ಷ ರೂ. ಅನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 14 ಪೊಲೀಸ್ ಠಾಣೆಗಳಲ್ಲಿ 135 ದೂರು ದಾಖಲಾಗಿವೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ನಗರದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಬಿಇಎಲ್ ಲೇಔಟ್‌ನ ನಿವಾಸಿಯಾಗಿರುವ ಭವ್ಯಾ ಎಂಬುವರಿಗೆ ಟ್ರೇಡ್​ ಸ್ಟೇಷನ್​ ಕಂಪನಿ ಹೆಸರಿನಲ್ಲಿ ಆರೋಪಿಗಳು ಸಂಪರ್ಕಿಸಿದ್ದಾರೆ. ಬಳಿಕ ಹಣ ಹೂಡಿಕೆ ಮಾಡಿದರೆ ಮನೆಯಲ್ಲೇ ಕುಳಿತು ಹೆಚ್ಚು ಹಣ ಸಂಪಾದಿಸಬಹುದು ಎಂದು ಭರವಸೆ ನೀಡಿದ್ದಾರೆ. ಇದನ್ನು ನಂಬಿದ ಭವ್ಯಾ ಅವರು ಹಂತ-ಹಂತವಾಗಿ ಹೂಡಿಕೆ ಮಾಡಿದ್ದು, ಬರೊಬ್ಬರಿ 18.75 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಭವ್ಯಾ ಅವರು ನೀಡಿದ ದೂರಿನ ಮೇರೆಗೆ ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್ ನೇತೃತ್ವದ ಸಿಸಿಬಿ ಅಧಿಕಾರಿಗಳು ಪ್ರಕರಣದ ಜಾಡನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು