ಬೆಂಗಳೂರು: ಲೋಕಸಭಾ ಚುನಾವಣೆ ಏಪ್ರಿಲ್ 26ರಂದು ನಡೆಯಲಿದ್ದು, ಈ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಇನ್ನು ಐಟಿ – ಬಿಟಿ ಮಂದಿ ಮತದಾನದ ವೇಳೆ ಹಿಂದೇಟು ಹಾಕಬಾರದು. ಎಲ್ಲರೂ ಮತ ಚಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಂದು ಕಡ್ಡಾಯವಾಗಿ ರಜೆ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಆದೇಶವನ್ನು ಹೊರಡಿಸಿದ್ದಾರೆ.
ಮತದಾನ ಸಂಬಂಧ ಐಟಿ ಬಿಟಿ ಕಂಪನಿಗಳಿಗೆ ಬಿಬಿಎಂಪಿಯಿಂದ ಆದೇಶವನ್ನು ರವಾನೆ ಮಾಡಲಾಗಿದೆ. ಮತದಾನದ ದಿನ ಕಂಪನಿಗಳು ಕಡ್ಡಾಯವಾಗಿ ರಜೆ ನೀಡಬೇಕು.
ಸಿಬ್ಬಂದಿ ಮತದಾನ ಮಾಡುವ ಸಂಬಂಧ ರಜೆಯನ್ನು ಕೊಡಬೇಕು. ಈಗಾಗಲೇ ರಾಜ್ಯ ಸರ್ಕಾರ ಕೂಡ ರಜೆಯನ್ನು ಘೋಷಣೆ ಮಾಡಿದೆ. ಅಲ್ಲದೆ, ಈ ಸಂಬಂಧ ಬಿಬಿಎಂಪಿಯಿಂದ ಔಟರ್ ರಿಂಗ್ರೋಡ್ ಅಸೋಸಿಯೇಷನ್ಗೆ ಪತ್ರವೂ ರವಾನೆಯಾಗಿದೆ.