ಚಿಕ್ಕಬಳ್ಳಾಪುರ: ಫೋಟೋ ಶೂಟ್ ವೇಳೆ ಕಿಡಿಗೇಡಿಗಳು ಯುವಕನೊರ್ವನನ್ನ ಚಾಕು ಹಾಗೂ ಕೀ ಚೈನ್ನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರದರಾಮೇಶ್ವರ ಸಮೀಪದ ಡಾಬಾ ಒಂದರ ಬಳಿ ನಡೆದಿದೆ.
ಕಚೇರಿಪಾಳ್ಯದ ನಿವಾಸಿ ಸೂರ್ಯ (22) ಹತ್ಯೆಗೀಡಾದ ದುರ್ದೈವಿ. ಹತ್ಯೆಗೀಡಾದ ಯುವಕ ಹಾಗೂ ಆತನ ಸ್ನೇಹಿತರು ಹಬ್ಬದ ಸಲುವಾಗಿ ಸಿಂಗರಿಸಿದ್ದ ಡಾಬಾದ ಮುಂದೆ ಫೋಟೋ ತೆಗೆದುಕೊಳ್ಳುತ್ತಿದ್ದಾಗ ಯುವಕರ ತಂಡವೊಂದು ತಮ್ಮ ಫೊಟೋ ತೆಗೆಯುವಂತೆ ಹೇಳಿದೆ. ಬಳಿಕ ಅವರಿಂದ ಕ್ಯಾಮೆರಾ ಕಿತ್ತುಕೊಂಡು ಗಲಾಟೆ ಮಾಡಿದ್ದಾರೆ. ಈ ವೇಳೆ ಚಾಕು ಹಾಗೂ ಕೀ ಚೈನ್ ಬಳಸಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ತಿಳಿದಿದೆ. ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.