ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ. ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಮಾಜಿ ಸಚಿವ ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಸುಧಾಕರ್ ಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಅವರಿವರ ಕಾಲಿಗೆ ಬೀಳ್ತಿದ್ದಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಟಿಕೆಟ್ಗಾಗಿ ಸುಧಾಕರ್ ಅವರಿವರ ಕಾಲಿಗೆ ಬೀಳುತ್ತಿದ್ದಾನೆ. ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಕಾಲಿಗೆ ಬಿದ್ದಿದ್ದಾರೆ. ಸುಧಾಕರ್ ಡಬಲ್ ಗೇಮ್ ರಾಜಕಾರಣಿ ಎಂದು ಕಿಡಿಕಾರಿದರು.
ಸುಧಾಕರ್ ಡಬಲ್ ಗೇಮ್ ರಾಜಕಾರಣ ಬಿಟ್ಟು ರಾಜಕಾರಣ ಮಾಡಲಿ. ಬಿಜೆಪಿಯಲ್ಲೇ ಇರಿ ಇಲ್ಲಾ ಕಾಂಗ್ರೇಸ್ನಲ್ಲೇ ಇರಿ. ಇಲ್ಲೊ ಡಬಲ್ ಗೇಮ್ ಅಲ್ಲೂ ಡಬಲ್ ಗೇಮ್ ಆಡ್ತಿದ್ದರೆ ಕೊನೆಗೆ ಕೆಪಿಸಿಸಿ ಕಚೇರಿಯಲ್ಲಿ ಜವಾನ ಕೆಲಸನೂ ಸಿಗಲ್ಲ ಎಂದರು.